alex Certify ಲಾಡ್ಜ್ ನಲ್ಲಿ ಗೆಳೆಯನೊಂದಿಗೆ ವಿದ್ಯಾರ್ಥಿನಿ, ದೈಹಿಕ ಸಂಪರ್ಕದ ವೇಳೆಯಲ್ಲೇ ಆಘಾತಕಾರಿ ಘಟನೆ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಡ್ಜ್ ನಲ್ಲಿ ಗೆಳೆಯನೊಂದಿಗೆ ವಿದ್ಯಾರ್ಥಿನಿ, ದೈಹಿಕ ಸಂಪರ್ಕದ ವೇಳೆಯಲ್ಲೇ ಆಘಾತಕಾರಿ ಘಟನೆ..?

ಭುವನೇಶ್ವರ್: ಲಾಡ್ಜ್ ನಲ್ಲಿದ್ದ ಯುವತಿ ಮೃತಪಟ್ಟ ಬಳಿಕ ಆಕೆಯ ಪ್ರಿಯಕರ ಗೆಳೆಯನೊಂದಿಗೆ ಸೇರಿ ಮೃತದೇಹವನ್ನು ದೂರಕ್ಕೆ ಕೊಂಡೊಯ್ದು ರಸ್ತೆಬದಿ ಎಸೆದ ಘಟನೆ ಒಡಿಶಾದ ಬಾಬ್ ಪುರ್ ಜಿಲ್ಲೆಯಲ್ಲಿ ನಡೆದಿದೆ.

ಕೌಕಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಯೂರ್ ಗಂಜ್  ಜಿಲ್ಲೆಯ ಯುವತಿಯ ಆರ್.ಡಿ. ಮಹಿಳಾ ಯುನಿವರ್ಸಿಟಿ ವಿದ್ಯಾರ್ಥಿನಿಯಾಗಿದ್ದಾಳೆ.

ಯುವತಿ ಹಾಗೂ ಆಕೆಯ ಪ್ರಿಯಕರ ರಾಕೇಶ್ ಹೋಟೆಲ್ ನಲ್ಲಿ ತಂಗಿದ್ದರು. ದೈಹಿಕ ಸಂಪರ್ಕದ ನಂತರದಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ನಂತರದಲ್ಲಿ ಆಕೆ ಮೃತಪಟ್ಟಿರುವುದು ಗೊತ್ತಾಗಿತ್ತು. ಸ್ನೇಹಿತನಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ಆತನೊಂದಿಗೆ ಸ್ಕೂಟರ್ ನಲ್ಲಿ ಶವ ತೆಗೆದುಕೊಂಡು ದಾರಿಮಧ್ಯೆ ಎಸೆದು ಪರಾರಿಯಾಗಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆತ ತಿಳಿಸಿದ್ದಾನೆ.

ಯುವತಿಯ ತಂದೆ ನೀಡಿರುವ ಮಾಹಿತಿಯಂತೆ ಜನವರಿ 24 ರಂದು ಟೀಚರ್ ಮಗಳ ಬರ್ತಡೇ ಸಮಾರಂಭಕ್ಕೆ ಹೋಗುವುದಾಗಿ ಮನೆಯಿಂದ ಹೋಗಿದ್ದ ಯುವತಿ 25 ರಂದು ಬರ್ತಡೇ ಸಮಾರಂಭ ಮುಗಿಸಿ ಜನವರಿ 26 ರಂದು ಬೆಳಗ್ಗೆ ಊರಿಗೆ ಹೊರಟಿದ್ದಾಳೆ. ಮಧ್ಯಾಹ್ನದ ವೇಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಸ್ನೇಹಿತರ ಮನೆಯಲ್ಲಿ ತಂಗಿ ಮಾರನೆ ದಿನ ಬರುವುದಾಗಿ ತಿಳಿಸಿದ್ದಾಳೆ. ಆದರೆ ಆಕೆಗೆ ರಾತ್ರಿ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ರಾಕೇಶ್ ಮತ್ತು ಯುವತಿ ಪ್ರೀತಿಸಿದ್ದು ರಾಕೇಶ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಳು. ಆತನೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...