ಮರಳು ಶಿಲ್ಪ ಕಲಾವಿದರು ವಿಶೇಷ ಸಂದರ್ಭಗಳಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸಿ ಜನರ ಗಮನ ಸೆಳೆಯುವ ಕೆಲಸಮಾಡುತ್ತಾರೆ. ಇದೀಗ ಒಡಿಶಾದ ಕಲಾವಿದ ಮರಳಿನಲ್ಲಿ ಸುಂದರವಾದ ಶ್ರೀರಾಮಮಂದಿರ ಸಿದ್ಧಪಡಿಸಿದ್ದಾರೆ.
ಒಡಿಶಾ ಮೂಲದ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ರಾಮನವಮಿಯ ಮುನ್ನಾದಿನದಂದು ಪುರಿ ಕಡಲತೀರದಲ್ಲಿ ರಾಮಮಂದಿರದ ಪ್ರತಿಕೃತಿ ರಚಿಸಿದರು. ಜೊತೆಗೆ ಭಗವಾನ್ ಶ್ರೀರಾಮನ ಆರು ಅಡಿ ಎತ್ತರದ ವಿಗ್ರಹವನ್ನು ರೂಪಿಸಿದ್ದಾರೆ.
ರಾಮನವಮಿ ಸಂದರ್ಭದಲ್ಲಿ ರಾಮನ ಮೂರ್ತಿಯ ಜೊತೆಗೆ ಅಯೋಧ್ಯೆಯ ಶ್ರೀರಾಮಮಂದಿರದ ಪ್ರತಿಕೃತಿ ರಚಿಸಿದ್ದೇನೆ. ಆದಷ್ಟು ಶೀಘ್ರದಲ್ಲೇ ಮಂದಿರ ನಿರ್ಮಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಮುದ್ರದ ಮುಂಭಾಗದಲ್ಲಿ ರೂಪಿತಗೊಂಡ ಈ ಕಲಾಕೃತಿ ಬಣ್ಣದಲ್ಲಿ ವಿಶೇಷವಾಗಿ ಕಂಗೊಳಿಸುತ್ತದೆ. ಮಂದಿರದ ಮುಂಭಾಗ ಹಸಿರು ಗಿಡಗಳ ನಡುವೆ ರಾಮನ ಕಲಾಕೃತಿ ಜೊತೆಗೆ ರಾಮನವಮಿಯ ಶುಭಾಶಯವನ್ನು ಹಾರೈಸಲಾಗಿದೆ.