ಪ್ರಾಕೃತಿಕ ವಿಕೋಪಗಳಿಗೆ ಸದಾ ತುತ್ತಾಗುವ ಒಡಿಶಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಿಂಚಿನ ಹೊಡೆತದಿಂದಲೇ 1,621 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುದಮ್ ಮರಾಂಡಿ ಸದನದಲ್ಲಿ ಲಿಖಿತ ಉತ್ತರ ನೀಡುವ ವೇಳೆ, 2017-18ರಿಂದ ಇಲ್ಲಿವರೆಗೂ ಮಿಂಚಿನ ಏಟಿಗೆ ಮೃತಪಟ್ಟವರ ಅಂಕಿಅಂಶಗಳ ಬಗ್ಗೆ ತಿಳಿಸಿದ್ದು, ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರ ಕುಟುಂಬಗಳಿಗೂ ತಲಾ ನಾಲ್ಕು ಲಕ್ಷ ರೂಪಾಯಿಗಳವರೆಗೂ ಪರಿಹಾರ ನೀಡಲಾಗಿದೆ ಎಂದಿದ್ದಾರೆ.
ಹದಗೆಟ್ಟ ಆರೋಗ್ಯದಿಂದ ಹತಾಶೆಗೊಂಡು ಪತ್ನಿಯನ್ನು ಇರಿದು ಕೊಂದ ವೃದ್ಧ ಪತಿ
ಮಿಂಚಿನ ಹೊಡೆತದಿಂದ ಸಾವುಗಳಾಗುವುದನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಸಚಿವರು ವಿವರಿಸಿದ್ದಾರೆ. ಅರ್ತ್ ನೆಟ್ವರ್ಕ್ಸ್‌ನೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಮಿಂಚಿನ ಬಡಿತ ಹೆಚ್ಚಿರುವ ಪ್ರದೇಶಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಲು ಮುಂದಾಗಿದೆ.
ಈ ಸೆನ್ಸರ್‌ಗಳು 200250 ಕಿಮೀ ದೂರದವರೆಗೂ ಸಂಭವಿಸಬಹುದಾದ ಮಿಂಚುಗಳ ಸಾಧ್ಯತೆಗಳನ್ನು ಮೊದಲೇ ಗ್ರಹಿಸುವ ಕ್ಷಮತೆಯನ್ನು ಹೊಂದಿವೆ.