ಸಾಗರೋತ್ತರ ಭಾರತೀಯ ಪೌರತ್ವ (ಒಸಿಐ) ಕಾರ್ಡ್ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಇನ್ಮುಂದೆ ಭಾರತಕ್ಕೆ ಬರುವ ವೇಳೆ ಹಳೆ ಪಾಸ್ಪೋರ್ಟ್ ಇಟ್ಟುಕೊಳ್ಳುವ ಅಗತ್ಯವಿಲ್ಲ. ಒಸಿಐ ಕಾರ್ಡ್ ಜೊತೆ ಹಳೆ ಪಾಸ್ಪೋರ್ಟ್ ಇಟ್ಟುಕೊಳ್ಳುವ ನಿಯಮವನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಹಳೆಯ ಪಾಸ್ಪೋರ್ಟ್ ಸಂಖ್ಯೆ ಹೊಂದಿರುವ ಒಸಿಐ ಕಾರ್ಡ್ ಜೊತೆ ಪ್ರಯಾಣ ಬೆಳೆಸುವವರು ಹಳೆ ಪಾಸ್ಪೋರ್ಟ್ ಜೊತೆಗಿಟ್ಟುಕೊಳ್ಳುವ ಅಗತ್ಯವಿಲ್ಲ. ಆದ್ರೆ ಹೊಸ ಪಾಸ್ಪೋರ್ಟ್ ಕಡ್ಡಾಯವಾಗಿ ಜೊತೆಗಿರಬೇಕೆಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ. 20 ವರ್ಷಕ್ಕಿಂತ ಕಡಿಮೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಕಾರ್ಡುದಾರರಿಗೆ ಒಸಿಐ ಕಾರ್ಡ್ ನವೀಕರಣದ ಗಡುವನ್ನು ಡಿಸೆಂಬರ್ 31, 2021 ಕ್ಕೆ ವಿಸ್ತರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ರಾಯಭಾರ ಕಚೇರಿ ಹೇಳಿದೆ.
2005 ರಿಂದ ಜಾರಿಯಲ್ಲಿರುವ ಒಸಿಐ ಮಾರ್ಗಸೂಚಿಗಳ ಪ್ರಕಾರ, 20 ವರ್ಷಕ್ಕಿಂತ ಕಡಿಮೆ ಮತ್ತು 50 ವರ್ಷ ಮೇಲ್ಪಟ್ಟ ಒಸಿಐ ಕಾರ್ಡ್ ಹೊಂದಿರುವವರು ಹೊಸ ಪಾಸ್‌ಪೋರ್ಟ್ ತಯಾರಿಸುವ ವೇಳೆ ಪ್ರತಿ ಬಾರಿ ಕಾರ್ಡನ್ನು ನವೀಕರಿಸಬೇಕಾಗುತ್ತದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತ ಸರ್ಕಾರ ತನ್ನ ಗಡುವನ್ನು ಹಲವಾರು ಬಾರಿ ವಿಸ್ತರಿಸಿದೆ. ಆದ್ರೆ ಹಳೆ ಪಾರ್ಸ್ ಪೋರ್ಟ್ ಗೆ ಇದೇ ಮೊದಲ ಬಾರಿ ವಿನಾಯಿತಿ ನೀಡಿದೆ.