ಧಾರವಾಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳೆಂದು ವಿಶೇಷಚೇತನ ಮಗಳನ್ನ ತಾಯಿ ಕೊಲೆ ಮಾಡಿರುವ ಘಟನೆ ಧಾರವಾಡದ ನಗರದ ಕಮಲಾಪುರ ಹೂಗಾರ ಓಣಿಯಲ್ಲಿ ಘಟನೆ ನಡೆದಿದೆ.
ತಾಯಿ ಜ್ಯೋತಿ ಹಾಗೂ ಪ್ರಿಯಕರ ರಾಹುಲ್ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ.ಹುಬ್ಬಳ್ಳಿಯ ನವನಗರ ಮೂಲದ ರಾಹುಲ್ ಜೊತೆ ಜ್ಯೋತಿ ಅನೈತಿಕ ಸಂಬಂಧ ಹೊಂದಿದ್ದಳು, ಇದಕ್ಕೆ ಮಗಳು ಅಡ್ಡಿಯಾಗಿದ್ದಾಳೆ ಎಂದು ಪ್ರಿಯಕರ ರಾಹುಲ್ ಜೊತೆ ಸೇರಿಕೊಂಡು ಮಗಳನ್ನೇ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಘಟನೆ ಸಂಬಂಧ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ದಿನೇ ದಿನೇ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕ ಮನೆ ಮಾಡಿದೆ.