ನೀವು ರಾತ್ರಿ ಮಲಗುವಾಗ ಹೊಟ್ಟೆ ತುಂಬ ತಿನ್ನದೇ ಡಯಟ್ ಪಾಲನೆ ಮಾಡಿದರೂ ಕೂಡ ನಿದ್ರೆಯಲ್ಲಿ ನಿಮ್ಮ ದೇಹದಲ್ಲಿನ ಕೊಬ್ಬು ಬಳಕೆಯಾಗುವುದು ಕಡಿಮೆ ಆದಲ್ಲಿ ಸ್ಥೂಲಕಾಯದ ಶರೀರ ಪಡೆಯುವುದು ತಪ್ಪಲ್ಲ.
ಹಲವರು ಹೊಟ್ಟೆ ತುಂಬ ತಿಂದು ತೇಗಿ ಮಲಗಿದರೂ ಕೂಡ ಅವರು ಸಪೂರ ಶರೀರವನ್ನೇ ಅಚ್ಚುಕಟ್ಟಾಗಿ ಹೊಂದಿರುತ್ತಾರೆ. ಬಹುತೇಕರು ಸುಮ್ಮನಿದ್ದರೂ ಹೊಟ್ಟೆ ಉಬ್ಬರಿಸಿಕೊಂಡು ದಪ್ಪಗಾಗುತ್ತಲೇ ಇರುತ್ತಾರೆ ! ಇದಕ್ಕೆಲ್ಲ ಮುಖ್ಯ ಕಾರಣ ಮೆಟಬಾಲಿಸಮ್, ಅಂದರೆ ಚಯಾಪಚಯ ಪ್ರಕ್ರಿಯೆ.
ರಾತ್ರಿ ವೇಳೆ ನಿದ್ರೆಯಲ್ಲಿದ್ದಾಗ ನಮ್ಮ ದೇಹವು ತನ್ನ ರಿಪೇರಿ ಕೆಲಸಗಳಿಗೆ ಹೆಚ್ಚು ಕಾರ್ಬೊಹೈಡ್ರೇಟ್‌ಗಳನ್ನು ಬಳಸಿಕೊಂಡರೆ, ಕೊಬ್ಬು ಶೇಖರಣೆ ಹೆಚ್ಚಾಗಿ ದಪ್ಪಗಾಗುತ್ತೀರಿ. ಅದೇ ಮೆಟಬಾಲಿಸಮ್ ಚೆನ್ನಾಗಿದ್ದಲ್ಲಿ, ನಿದ್ರೆಯಲ್ಲೇ ದೇಹದ ಬಹುತೇಕ ಕೊಬ್ಬು ದೇಹದಿಂದ ಬಳಸಲ್ಪಟ್ಟು ಸಪೂರ ಶರೀರ ನಿಮ್ಮದಾಗುತ್ತದೆ.
ನಿದ್ರೆಯಲ್ಲಿನ ಉಸಿರಾಟ, ಹೊರಳಾಟಕ್ಕೂ ದೇಹ ತನ್ನಲ್ಲಿನ ಕೊಬ್ಬು ಸುಟ್ಟು ಶಕ್ತಿಯಾಗಿ ಬಳಸಿಕೊಳ್ಳುತ್ತದೆ.
ಎಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ನಮ್ಮ ದೇಹವು ಹೊರಹಾಕುತ್ತದೆ ಎನ್ನುವುದರ ಅಳತೆ ಇದು. ಇದರಿಂದಾಗಿ ಸ್ಥೂಲಕಾಯ ಉಂಟಾಗಿ, ನಂತರ ಹಲವು ರೋಗಗಳಿಗೆ ಗುರಿಯಾಗುವುದನ್ನು ತಡೆಯಬಹುದಾಗಿದೆ.
ನಿದ್ರೆ ಎನ್ನುವ ಉಪವಾಸದ ಅವಧಿಯಲ್ಲಿ ಪ್ರತಿ ಐದು ನಿಮಿಷಕ್ಕೆ 127 ಜನರ ಉಸಿರಿನಿಂದ ಹೊರಬರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಅಧ್ಯಯನ ಮಾಡಲಾಗಿದೆ. ಅದರ ಪ್ರಕಾರ 18-24ರ ವಯಸ್ಸಿನಲ್ಲಿ ಮೆಟಬಾಲಿಸಮ್, ಆರ್‌ಕ್ಯೂ ಬಹುತೇಕರಲ್ಲಿ ಚೆನ್ನಾಗಿಯೇ ಇರುತ್ತದೆ. ನಂತರದ ವಯಸ್ಸಿನಲ್ಲಿ ಇದರ ನಿರ್ವಹಣೆ ಮುಖ್ಯ.
ವ್ಯಾಯಾಮ, ಹಣ್ಣು-ತರಕಾರಿ ಸೇವನೆಯೇ ಇದಕ್ಕಿರುವ ನೈಸರ್ಗಿಕ ಉಪಾಯಗಳು.