ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು ಕರಗಿಸೋದು ಅನ್ನೋ ಚಿಂತೆ ನಿಮಗೂ ಇರಬಹುದು. ಹೊಟ್ಟೆಯ ಕೊಬ್ಬು ಇಳಿಸುವ 10 ಸರಳ ಉಪಾಯಗಳು ನಿಮ್ಮ ಅಡುಗೆ ಮನೆಯಲ್ಲೇ ಇವೆ.
ಟೊಮ್ಯಾಟೋ : ಇದು ನಿಮ್ಮ ಡಯಟ್ ಲಿಸ್ಟ್ ನಲ್ಲಿರಲಿ. ರಕ್ತದಲ್ಲಿ ಲಿಪಿಡ್ ಗಳ ಪ್ರಸರಣಕ್ಕೆ ಟೊಮ್ಯಾಟೋ ನೆರವಾಗುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲ ಟೊಮ್ಯಾಟೋ ಸೇವನೆಯಿಂದ ಕೊಬ್ಬು ಶೇಖರಣೆ ಪ್ರಮಾಣವೂ ಕಡಿಮೆಯಾಗುತ್ತದೆ.
ಆ್ಯಪಲ್ ಸೈಡರ್ ವಿನಿಗರ್ : ಇದು ನಿಮ್ಮ ಹೊಟ್ಟೆಯಲ್ಲಿರುವ ಹೆಚ್ಚುವರಿ ಕೊಬ್ಬಿನ ಮೇಲೆ ದಾಳಿ ಮಾಡುತ್ತದೆ. ಊಟಕ್ಕೂ ಮುನ್ನ ಇದನ್ನು ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಸೇಬನ್ನು ತಿಂದ್ರೆ ನಿಮಗೆ ಹೊಟ್ಟೆ ತುಂಬಿದಂತಹ ಭಾವನೆ ಬರುತ್ತದೆ, ಆಗ ಸಿಕ್ಕಿದ್ದನ್ನೆಲ್ಲ ತಿನ್ನುವ ಅಭ್ಯಾಸ ಬಿಡಬಹುದು.
ಪುದೀನಾ : ಇದರಿಂದ 2 ಬಗೆಯ ಪ್ರಯೋಜನವಿದೆ. ನಿಮ್ಮ ಮೂತ್ರಕೋಶದಿಂದ ಹೆಚ್ಚುವರಿ ಪಿತ್ತರಸವನ್ನು ತೆಗೆದು ಪುದೀನಾ ನಿಮ್ಮ ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹದ ಚಯಾಪಚಯ ಪ್ರಮಾಣವನ್ನು ಸುಧಾರಿಸಲು ಕೂಡ ಸಹಾಯ ಮಾಡುತ್ತದೆ.
ಅಲೋವೆರಾ ಜ್ಯೂಸ್ : ಹೊಟ್ಟೆಯ ಕೊಬ್ಬು ಇಳಿಸಲು ಅಲೋವೆರಾ ಜ್ಯೂಸ್ ಅತ್ಯುತ್ತಮ ಪದಾರ್ಥ. ಅಲೋವೆರಾ ತಿರುಳಿನ ಜ್ಯೂಸ್ ಸೇವಿಸಿದ್ರೆ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು.
ನಿಂಬೆರಸ : ಭಾರತೀಯ ಅಡುಗೆಯ ಅವಿಭಾಜ್ಯ ಅಂಗವಿದು. ಪದರಗಳ ಮೂಲಕ ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಪ್ರತಿದಿನ ಬೆಳಗ್ಗೆ ಒಂದು ಲೋಟ ನೀರಿಗೆ ನಿಂಬೆರಸ, ಅರ್ಧ ಚಮಚ ಜೇನುತುಪ್ಪ ಹಾಕಿಕೊಂಡು ಕುಡಿಯಿರಿ.
ಕಲ್ಲಂಗಡಿ : ಶೇ.91 ರಷ್ಟು ನೀರಿನಂಶವೇ ಇರುವ ಹಣ್ಣು ಇದು. ಊಟಕ್ಕೂ ಮೊದಲು ಒಂದ್ನಾಲ್ಕು ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ತಿಂದ್ರೆ ನಿಮಗೆ ಹೊಟ್ಟೆ ತುಂಬಿದಂತೆನಿಸುತ್ತದೆ. ಜಾಸ್ತಿ ಕ್ಯಾಲೋರಿ ತೆಗೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ.
ಸೌತೆಕಾಯಿ : ಇದು ಕೂಡ ಕಲ್ಲಂಗಡಿ ಹಣ್ಣಿನಂತೆಯೇ, ಸೌತೆಕಾಯಿಯಲ್ಲೂ ನೀರಿನಂಶವೇ ಹೆಚ್ಚು. 100 ಗ್ರಾಂ ಸೌತೆಕಾಯಿಯಲ್ಲಿ ಕೇವಲ 45 ಕ್ಯಾಲೋರಿ ಇರುತ್ತದೆ. ತಾಜಾ ಸೌತೆಕಾಯಿ ಸೇವಿಸಿದ್ರೆ ಒಂದೇ ವಾರದಲ್ಲಿ ನಿಮ್ಮ ಹೊಟ್ಟೆಯ ಬೊಜ್ಜು ಮಾಯವಾಗುತ್ತದೆ.
ಶುಂಠಿ ಚಹಾ : ನಿಮ್ಮ ಚಹಾಕ್ಕೆ ಸ್ವಲ್ಪ ಶುಂಠಿ ಹಾಕಿಕೊಂಡು ಕುಡಿಯಿರಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ, ಇದ್ರಿಂದ ಫ್ಯಾಟ್ ಬರ್ನ್ ಮಾಡಬಹುದು.
ಬೆಳ್ಳುಳ್ಳಿ : ಇದು ಕೂಡ ಶುಂಠಿಯಂತೆ ಬೆಸ್ಟ್ ಫುಡ್. ನೀವು ತೂಕ ಇಳಿಸಲು ಟ್ರೈ ಮಾಡ್ತಾ ಇದ್ರೆ ಬೆಳ್ಳುಳ್ಳಿಯನ್ನು ಹೆಚ್ಹೆಚ್ಚು ಬಳಸಿ. ಸಂಶೋಧನೆ ಪ್ರಕಾರ ಬೆಳ್ಳುಳ್ಳಿ ದೇಹದಲ್ಲಿ ಕೊಬ್ಬು ಶೇಖರಣೆಗೆ ಅಡ್ಡಿ ಉಂಟುಮಾಡುತ್ತದೆ.
ಬೀನ್ಸ್ : ನಿಮಗೆ ಬೋರಿಂಗ್ ಎನಿಸುವ ಗ್ರೀನ್ ಬೀನ್ಸ್ ಕೂಡ ಮ್ಯಾಜಿಕ್ ಮಾಡಬಲ್ಲದು. ನಿಮ್ಮ ದೇಹದ ಕೊಬ್ಬು ಕರಗಿಸುವ ಜೊತೆಗೆ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತದೆ. ಇದರಲ್ಲಿ ರಿಚ್ ಫೈಬರ್ ಇರೋದ್ರಿಂದ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ. ಆ್ಯಪಲ್ ನಂತೆ ಬೀನ್ಸ್ ನಲ್ಲೂ ಪೆಕ್ಟಿನ್ ಅಧಿಕವಾಗಿರುವುದರಿಂದ ನಿಮಗೆ ಬೇಗನೆ ಹಸಿವಾಗುವುದಿಲ್ಲ.