ಕಚೇರಿ ಕೆಲಸಗಳಲ್ಲಿ ಬ್ಯುಸಿ ಇರುವವರಿಗೆ ಬೆಳಗ್ಗಿನ ಹೊತ್ತು ತಿಂಡಿಯನ್ನ ಮಾಡೋದಕ್ಕೆ ಸಮಯ ಇರೋದಿಲ್ಲ. ಪ್ರತಿದಿನ ಹೋಟೆಲ್ ತಿಂಡಿ ತಿನ್ನೋದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇಂತಹ ಸಂದರ್ಭದಲ್ಲಿ ಅನೇಕರು ಓಟ್ಸ್ ಇಲ್ಲವೇ ಕಾರ್ನ್ ಫ್ಲೇಕ್ಸ್ಗಳ ಮೊರೆ ಹೋಗುವುದುಂಟು. ಅದರಲ್ಲೂ ವಿಶೇಷವಾಗಿ ಡಯಟ್ನಲ್ಲಿ ಇರುವವರಂತೂ ಓಟ್ಸ್ ಹಾಗೂ ಕಾರ್ನ್ ಫ್ಲೇಕ್ಗಳನ್ನ ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡಿರ್ತಾರೆ. ಹಾಗಾದರೆ ಈ ಕಾರ್ನ್ ಫ್ಲೇಕ್ ಹಾಗೂ ಒಟ್ಸ್ನಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಸೂಕ್ತ ಅನ್ನೋದನ್ನ ತಿಳಿಯೋಣ.
ಕಾರ್ನ್ಫ್ಲೇಕ್ಗಳು ಹೃದಯದ ಆರೋಗ್ಯವನ್ನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
ಹಾಲಿನ ಜೊತೆ ಕಾರ್ನ್ಫ್ಲೇಕ್ ಸೇರಿಸಿ ತಿನ್ನೋದ್ರಿಂದ ದೇಹಕ್ಕೆ ಅಗಾಧ ಪ್ರಮಾಣ ಪ್ರೋಟಿನ್ಗಳು ಲಭಿಸುತ್ತದೆ. ಬಾದಾಮಿ ಹಾಗೂ ಜೇನುತುಪ್ಪವನ್ನ ಸೇರಿಸಿ ಕಾರ್ನ್ಫ್ಲೇಕ್ ತಿಂದರೂ ಸಹ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಶ್ವಾಸಕೋಶಗಳ ಆರೋಗ್ಯವನ್ನ ಕಾಪಾಡುವಲ್ಲಿಯೂ ಕಾರ್ನ್ಫ್ಲೇಕ್ಗಳು ಸಹಕಾರಿ.
ತೂಕ ಇಳಿಕೆಗಾಗಿ ಡಯಟ್ ಮಾಡುತ್ತಿರುವವರಿಗೆ ಬೆಳಗ್ಗಿನ ಉಪಹಾರವಾಗಿ ಕಾರ್ನ್ಫ್ಲೇಕ್ ಉತ್ತಮ ಆಹಾರವಾಗಿದೆ. ಕಾರ್ನ್ಫ್ಲೇಕ್ ಸೇವನೆ ಮಾಡಿದ ಬಳಿಕ ನಿಮಗೆ ದೀರ್ಘಕಾಲದವರೆಗೆ ಹಸಿವಿನ ಅನುಭವಾಗೋದಿಲ್ಲ.
ಓಟ್ಸ್ನಲ್ಲಿ ಫೈಬರ್ ಅಂಶ ಅತಿಯಾಗಿ ಇರೋದ್ರಿಂದ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಮಲಬದ್ಧತೆಯನ್ನ ನಿವಾರಿಸುವಲ್ಲಿ ಓಟ್ಸ್ ಪ್ರಮುಖ ಪಾತ್ರ ವಹಿಸುತ್ತದೆ.
ಉಪಹಾರದ ಸಮಯದಲ್ಲಿ ಓಟ್ಸ್ ಸೇವನೆ ಮಾಡೋದ್ರಿಂದ ಬಹಳ ಸಮಯದವರೆಗೆ ಹಸಿವಿನ ಅನುಭವ ಆಗೋದಿಲ್ಲ. ಇದರಿಂದ ತೂಕ ಇಳಿಕೆಗೂ ಸಹಕಾರಿ. ಓಟ್ಸ್ನ್ನು ಗ್ಲೈಸಮಿಕ್ ಇಂಡೆಕ್ಸ್ ಆಹಾರದ ಪಟ್ಟಿಗೆ ಸೇರಿಸಬಹುದು. ಇದು ದೇಹದಲ್ಲಿ ಸಕ್ಕರೆ ಅಂಶವನ್ನ ಸಮತೋಲನದಲ್ಲಿ ಇಡುತ್ತದೆ ಮಾತ್ರವಲ್ಲದೇ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಜ್ಯೂಸ್ ಜೊತೆಯಲ್ಲಿ ಓಟ್ಸ್ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗಲಿದೆ.
ಓಟ್ಸ್ ಹಾಗೂ ಕಾರ್ನ್ಫ್ಲೇಕ್ಗಳೆರಡೂ ಉತ್ತಮ ಉಪಹಾರವಾಗಿದೆ. ಆದರೆ ದೈಹಿಕವಾಗಿ ಸಕ್ರಿಯವಾಗಿರುವವರಿಗೆ ಕಾರ್ನ್ ಫ್ಲೇಕ್ ಹೇಳಿ ಮಾಡಿಸಿದಂತಹ ಉಪಹಾರವಾಗಿದೆ. ಒಂದು ವೇಳೆ ನೀವು ಮಧುಮೇಹಿ ಆಗಿದ್ದರೆ ಓಟ್ಸ್ ನಿಮಗೆ ಸೂಕ್ತವಾದ ಬ್ರೇಕ್ಫಾಸ್ಟ್ ಆಗಿದೆ. ನೀವು ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಓಟ್ಸ್ ಸೇವನೆ ಮಾಡೋವಾಗ ಎಚ್ಚರದಿಂದ ಇರಬೇಕು. ಓಟ್ಸ್ನಲ್ಲಿ ಫೈಬರ್ ಅಗಾಧ ಪ್ರಮಾಣದಲ್ಲಿ ಇರೋದ್ರಿಂದ ಹೊಟ್ಟೆ ಹಾಳಾಗುವ ಸಾಧ್ಯತೆ ಕೂಡ ಇರುತ್ತದೆ.