
ತೂಕ ಇಳಿಸಿಕೊಳ್ಳಲು ಓಟ್ ಮೀಲ್ ಉತ್ತಮ ಆಹಾರ, ಇದರಲ್ಲಿ ಫೈಬರ್ ಅಧಿಕವಾಗಿದ್ದು, ಇದು ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಎ, ಬಿಟಮಿನ್ ಬಿ6 ಮತ್ತು ಮೆಗ್ನೀಶಿಯಂನ್ನು ಹೊಂದಿರುತ್ತದೆ.
ತೂಕ ಇಳಿಸಿಕೊಳ್ಳಲು ಓಟ್ ಮೀಲ್ ಜೊತೆಗೆ ಇವುಗಳನ್ನು ಮಿಕ್ಸ್ ಮಾಡಿ ತಿಂದರೆ ತೂಕ ಬಹಳ ಬೇಗನೆ ಕಡಿಮೆಯಾಗುತ್ತದೆ.
*ಚಿಯಾ ಬೀಜಗಳು : ಇದು ಹಲವಾರು ಪೋಷಕಾಂಶ ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಇದರಲ್ಲಿ ಒಮೆಗಾ 3 ಅಧಿಕವಾಗಿದೆ. ಹಸಿವನ್ನು ಕಡಿಮೆ ಮಾಡಲು ಓಟ್ ಮೀಲ್ ಜೊತೆಗೆ ಇದನ್ನು ಮಿಕ್ಸ್ ಮಾಡಿ.
*ರಾಸ್ಬೆರಿ : ಇದರಲ್ಲಿ ಫೈಬರ್, ವಿಟಮಿನ್, ಖನಿಜಗಳು ಅಧಿಕವಾಗಿದೆ. ಇದನ್ನು ಓಟ್ ಮೀಲ್ ಜೊತೆಗೆ ಮಿಕ್ಸ್ ಮಾಡಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.
*ಪೀನಟ್ ಬಟರ್ : ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ತೂಕ ಇಳಿಸಲು ಬಯಸುವವರು ಇದನ್ನು ಓಟ್ ಮೀಲ್ ಜೊತೆಗೆ ನಿಯಮಿತ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಸೇವಿಸಬಹುದು.
*ಬಾಳೆಹಣ್ಣು : ಇದರಲ್ಲಿ ಫೈಬರ್ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದೆ. ಇದು ಓಟ್ ಮೀಲ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ತೂಕ ನಷ್ಟಕ್ಕೆ ಕಾರಣವಾಗುತ್ತದೆ.