alex Certify ರಾತ್ರಿ ವೇಳೆ ಮನೆ ಬಾಗಿಲು ತಟ್ಟುತ್ತಿದ್ದ ಘಟನೆಗೆ ಟ್ವಿಸ್ಟ್ ; ಝಾನ್ಸಿಯಲ್ಲಿ ನಿಗೂಢ ಮಹಿಳೆ ‌ʼಅರೆಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ವೇಳೆ ಮನೆ ಬಾಗಿಲು ತಟ್ಟುತ್ತಿದ್ದ ಘಟನೆಗೆ ಟ್ವಿಸ್ಟ್ ; ಝಾನ್ಸಿಯಲ್ಲಿ ನಿಗೂಢ ಮಹಿಳೆ ‌ʼಅರೆಸ್ಟ್ʼ

ಝಾನ್ಸಿಯಲ್ಲಿ ರಾತ್ರಿ ವೇಳೆ ಮನೆ ಬಾಗಿಲು ತಟ್ಟುತ್ತಿದ್ದ ಮಹಿಳೆಯೊಬ್ಬಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಕೆ ಸುತ್ತಿಗೆಯನ್ನು ಹೋಲುವ ವಸ್ತುವನ್ನು ಹಿಡಿದುಕೊಂಡು ಮನೆಗಳ ಬಾಗಿಲು ತಟ್ಟುತ್ತಿದ್ದಳು. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.

ಝಾನ್ಸಿಯ ಸಿಪ್ರಿ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ದೀನದಯಾಳ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಮುಖವಾಡ ಧರಿಸಿದ ಮಹಿಳೆ ಮಧ್ಯರಾತ್ರಿ ಮನೆಗಳ ಬಾಗಿಲು ತೆರೆಯಲು ಯತ್ನಿಸುತ್ತಿದ್ದಳು. ಆದರೆ, ಆಕೆಯ ಪ್ರಯತ್ನಗಳು ಸಫಲವಾಗಲಿಲ್ಲ. ಆಕೆಯ ಚಲನವಲನಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಮೊನ್ನೆ ರಾತ್ರಿ ಸಿಪ್ರಿ ಬಜಾರ್‌ನಲ್ಲಿ ಈ ಮಹಿಳೆಯನ್ನು ಸ್ಥಳೀಯರು ಬಂಧಿಸಿದ್ದಾರೆ. ಪೆಂಚ್ ಮೊಹಲ್ಲಾದಲ್ಲಿ ವಿವಾಹ ಮೆರವಣಿಗೆಯ ಬಳಿಕ ದಾದ್ರಾ ಪ್ರದರ್ಶನ ನಡೆಯುತ್ತಿತ್ತು. ಆಗ ಆ ಮಹಿಳೆ ಕಾಣಿಸಿಕೊಂಡಿದ್ದಳು. ಆಕೆಯ ಉಪಸ್ಥಿತಿ ಕಂಡು ಮಹಿಳೆಯರು ಭಯಭೀತರಾದರು. ಬಳಿಕ ಧೈರ್ಯ ತಂದುಕೊಂಡು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯ ಉದ್ದೇಶಗಳ ಬಗ್ಗೆ ಕುತೂಹಲ ಮೂಡಿತ್ತು. ಕೆಲವರು ಆಕೆಯ ಚಲನವಲನಗಳನ್ನು ಬಾಲಿವುಡ್‌ನ ‘ಸ್ತ್ರೀ’ ಸಿನಿಮಾಗೆ ಹೋಲಿಸುತ್ತಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...