ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ.
ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಯೋಗ್ಯ. ಕ್ಯಾನ್ಸರ್ ತಡೆಗಟ್ಟುವ ಗುಣವಿರುವುದರಿಂದ ಸೋಯಾ ಅವರೆ, ಔಷಧಿಯಾಗಿಯೂ ಆಹಾರದಲ್ಲಿ ಬಳಕೆಯಲ್ಲಿದೆ.
ಇಡ್ಲಿ, ದೋಸೆ ಆಂಬೊಡೆ ಮೊದಲಾದ ಆಹಾರ ತಯಾರಿಕೆಯಲ್ಲಿ ಸೋಯಾ ಅವರೆ ಬಳಸುವುದರಿಂದ ಪೌಷ್ಟಿಕವಾದ ಆಹಾರ ದೊರೆಯುತ್ತದೆ.
1 ಕೆ.ಜಿ. ಗೋಧಿಗೆ 100 ಗ್ರಾಂ ಸೋಯಾ ಬೆರೆಸಿ ಹಿಟ್ಟು ಮಾಡಿಸುವುದರಿಂದ ಚಪಾತಿ ಸ್ವಾದಿಷ್ಟಕರವಾಗಿರುತ್ತದೆ. ಹಾಗೆ ರಾಗಿಗೂ ಬೆರೆಸಿ ಹಿಟ್ಟು ಮಾಡಿಸಿ ಮುದ್ದೆ ಮಾಡುವುದರಿಂದ ಸತ್ವಯುತ, ಸಮತೋಲನದ ಆಹಾರ ನಮಗೆ ದೊರೆಯುತ್ತದೆ.