ನುಗ್ಗೇಕಾಯಿ ಬಹಳ ಚಿರಪರಿಚಿತವಾಗಿರುವಂತಹ ಒಂದು ತರಕಾರಿ. ನುಗ್ಗೇಕಾಯಿ ಹಾಗೂ ನುಗ್ಗೆ ಸೊಪ್ಪು ಇವರೆಡನ್ನೂ ಆಹಾರ ಪದಾರ್ಥವನ್ನಾಗಿ ಬಳಕೆ ಮಾಡಲಾಗುತ್ತದೆ. ನುಗ್ಗೆಕಾಯಿ ತಿನ್ನೋದ್ರಿಂದ ಬಾಯಿಗೆ ರುಚಿ ಹತ್ತೋದ್ರ ಜೊತೆ ಜೊತೆಗೆ ಇದರಲ್ಲಿ ಅಡಗಿರುವ ಅಗಾಧ ಪ್ರಮಾಣದ ಪೋಷಕಾಂಶಗಳು ನಿಮ್ಮ ದೇಹದ ಆರೋಗ್ಯವನ್ನೂ ಸುಧಾರಿಸಲಿದೆ.
ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿ ಇರಬೇಕು ಅಂದಲ್ಲಿ ನೀವು ನುಗ್ಗೆಕಾಯಿಯನ್ನ ಸೇವನೆ ಮಾಡೋದು ಒಳ್ಳೆಯದು. ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದಂತಹ ತರಕಾರಿ.
ಹೊಟ್ಟೆ ನೋವಿನಂತಹ ಸಮಸ್ಯೆ ಹೊಂದಿದ್ದರೂ ಸಹ ನಿಮಗೆ ನುಗ್ಗೆಕಾಯಿ ಸೇವನೆ ತುಂಬಾನೇ ಒಳ್ಳೆಯದು. ಆಸಿಡಿಟಿ ಸಮಸ್ಯೆ, ಅಜೀರ್ಣ ಸಮಸ್ಯೆ, ಮಲಬದ್ಧತೆಗಳಿಗೆ ನುಗ್ಗೆಕಾಯಿ ರಾಮಬಾಣವಾಗಿದೆ.
ನುಗ್ಗೆಕಾಯಿ ಎಲೆ ಹಾಗೂ ಹೂವಿನ ಸೇವೆನೆಯಿಂದ ದೃಷ್ಟಿ ಸಮಸ್ಯೆಗೆ ಪರಿಹಾರ ಸಿಗಲಿದೆ. ನಿಮಗೆ ದೃಷ್ಟಿ ದೋಷ ಕಾಣಿಸುತ್ತಿದ್ದಲ್ಲಿ ನೀವು ಈ ತರಕಾರಿಯನ್ನ ಆರೋಗ್ಯದ ದೃಷ್ಟಿಯಿಂದಲೂ ಸೇವನೆ ಮಾಡಬಹುದು.
ನುಗ್ಗೆಕಾಯಿ ಸೇವನೆಯಿಂದ ಕೂದಲು ಉದುರುವಿಕೆ ಕಡಿಮೆಯಾಗಲಿದೆ. ನಿರಂತರವಾಗಿ ನುಗ್ಗೆಕಾಯಿ ಸೇವನೆ ಮಾಡೋದ್ರಿಂದ ಕೂದಲು ಸೊಂಪಾಗಿ ಬೆಳೆಯಲಿದೆ.
ಇನ್ನುಳಿದಂತೆ ಕಿಡ್ನಿಯಲ್ಲಿ ಕಲ್ಲು ಹಾಗೂ ರಕ್ತದೊತ್ತಡದಿಂದ ಬಳಲುವವರೂ ಸಹ ನುಗ್ಗೆಕಾಯಿಯನ್ನ ಸೇವನೆ ಮಾಡಬಹುದಾಗಿದೆ.