ಪಲಾವ್ ಅಥವಾ ಗರಂ ಮಸಾಲೆ ಬಳಸಿ ಮಾಡುವ ಅಡುಗೆಗಳ ಪೈಕಿ ಜಾಯಿಕಾಯಿಗೆ ಮಹತ್ವದ ಸ್ಥಾನವಿದೆ. ಅದರ ಹೊರತಾಗಿ ಜಾಯಿಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ಜಾಯಿಕಾಯಿಯಿಂದ ತಯಾರಾದ ಎಣ್ಣೆಯನ್ನು ನೋವು ನಿವಾರಕವಾಗಿ ಬಳಸಲಾಗುತ್ತದೆ. ಇದರ ಕೆಲವೇ ಹನಿ ಎಣ್ಣೆ ಗಾಯದ ನೋವು ಅಥವಾ ಮಾಂಸಖಂಡಗಳ ನೋವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ರಾತ್ರಿ ಮಲಗುವ ಮುನ್ನ ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಬೆಚ್ಚಗಿನ ಹಾಲಿಗೆ ಬೆರೆಸಿ ಕುಡಿಯುವುದರಿಂದ ಹಿತಕರ, ತಡೆರಹಿತ ನಿದ್ದೆ ನಿಮ್ಮದಾಗುತ್ತದೆ.
ಉದರ ಸಂಬಂಧಿ ಸಮಸ್ಯೆಗಳ ನಿವಾರಣೆಗೂ ಇದು ಬಲು ಉಪಯುಕ್ತ. ನಿಮಗೆ ಭೇದಿ, ಮಲಬದ್ಧತೆಯಂಥ ಸಮಸ್ಯೆಗಳಿದ್ದರೂ ಅದರ ನಿವಾರಣೆಗೆ ಜಾಯಿಕಾಯಿ ಪುಡಿಯನ್ನು ಬಳಸುತ್ತಾರೆ. ಮೆದುಳಿನ ನರಗಳನ್ನು ಉತ್ತೇಜಿಸುವ ಶಕ್ತಿಯೂ ಇದಕ್ಕಿದೆ.