
ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಾರೆ. ತಮ್ಮ ಗಂಡು ಮಗು ಯಿಶಾನ್‌ನ ಚಿತ್ರಗಳನ್ನು ನುಸ್ರತ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ತನ್ನ ಪುಟಾಣಿ ಮಗ ಆತನ ತಂದೆಯ ಕೈ ಹಿಡಿದಿರುವ ಚಿತ್ರವನ್ನು ನುಸ್ರತ್ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಸಂಗಾತಿ ಯಶ್ ದಾಸ್‌ಗುಪ್ತಾ ಜೊತೆಗೆ ಯಿಶಾನ್‌ರನ್ನು ಆಗಸ್ಟ್ 26ರಂದು ಲೌಕಿಕ ಜಗತ್ತಿಗೆ ಸ್ವಾಗತಿಸಿದ ನುಸ್ರತ್, ತನ್ನ ಮಗನ ಮುಖವನ್ನು ಇನ್ನೂ ಎಲ್ಲೂ ತೋರಿಸಿಲ್ಲ. ಮಗನ ಖಾಸಗೀತನವನ್ನು ಕಾಪಾಡಿಕೊಳ್ಳಲು ಆತನ ತಂದೆ ಬಯಸುವ ಕಾರಣ ಆತನ ಮುಖವಿರುವ ಚಿತ್ರವನ್ನು ನುಸ್ರತ್ ಇದುವರೆಗೂ ಎಲ್ಲೂ ಹಂಚಿಕೊಂಡಿಲ್ಲ.
BIG NEWS: ಅಧಿಕಾರಕ್ಕೆ ಬರದಿದ್ರೆ ಜೆಡಿಎಸ್ ಮುಚ್ಚುವೆ: ಹೆಚ್.ಡಿ. ಕುಮಾರಸ್ವಾಮಿ
ಯಿಶಾನ್‌ನ ಜನನವಾಗುತ್ತಲೇ ಆತನ ತಂದೆ ಯಾರೆಂಬ ಕುರಿತು ನುಸ್ರತ್ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದಿದೆ. ಬಶೀರ್‌ಹಾತ್‌ನ ಸಂಸದೆ ಈ ಹಿಂದೆ ಉದ್ಯಮಿ ನಿಖಿಲ್ ಜೈನ್ ಜೊತೆಗೆ ವಿವಾಹವಾಗಿದ್ದರು. ಈ ಜೋಡಿ ಬೇರ್ಪಟ್ಟ ಬಳಿಕ ತಮ್ಮ ಸಹ ನಟನೊಂದಿಗೆ ಇರುವ ಸಂಬಂಧದ ಕುರಿತು ನುಸ್ರತ್ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ.
