
ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಯಾವಾಗಲೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ತಮ್ಮ ಪತಿ ನಿಖಿಲ್ ಜೈನ್ ಜೊತೆಗೆ ವಿವಾಹ ಬಂಧವನ್ನು ಮುರಿದುಕೊಂಡು ಈ ವಿಷಯವನ್ನು ಘೋಷಿಸುವ ಮೂಲಕ ನುಸ್ರತ್ ಸದ್ದು ಮಾಡಿದ್ದಾರೆ.
ಯಶ್ ದಾಸ್‌ಗುಪ್ತಾ ಎಂಬ ಮೂರನೇ ವ್ಯಕ್ತಿಯೊಂದಿಗೆ ನುಸ್ರತ್ ಲಿಂಕ್‌ನಲ್ಲಿರುವ ಸುದ್ದಿ ಜೋರಾದ ಹಿನ್ನೆಲೆಯಲ್ಲೇ ಈ ಬ್ರೇಕಪ್ ಆಗಿದೆ ಎನ್ನಲಾಗಿದೆ.
ಅಂದಹಾಗೆ, ಇದೇ ಫೆಬ್ರವರಿಯಲ್ಲಿ ಬಿಜೆಪಿ ಸೇರಿಕೊಂಡ ಯಶ್ ದಾಸ್‌ಗುಪ್ತಾ, ಬೆಂಗಾಲಿ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಕಾಲಿಟ್ಟಿದ್ದು, ಟಿವಿ ಧಾರಾವಾಹಿಗಳ ಮೂಲಕ ಹೆಸರು ಮಾಡಿದ್ದಾರೆ.
ಈಟಿವಿ ಬಾಂಗ್ಲಾದ ರಿಯಾಲಿಟಿ ಶೋ ’ರಿತುರ್ ಮೇಲಾ ಝೂಮ್ ತಾರಾ ರಾ ರಾ’ದಲ್ಲಿ ಭಾಗಿಯಾಗಿದ್ದ ಯಶ್, ಮತ್ತೊಬ್ಬ ನಟಿ-ಸಂಸದೆ ಮಿಮಿ ಚಕ್ರಬೊರ್ತಿ ಜೊತೆಗೆ ಪಾದಾರ್ಪಣೆ ಮಾಡಿದ್ದರು.
ಜೂನ್ 12ರಂದು ‘ಶುಗರ್ ಫ್ಯಾಕ್ಟರಿ’ ಚಿತ್ರದ ಟೀಸರ್ ರಿಲೀಸ್
ಇವರಿಬ್ಬರ ಲವಿ-ಡವಿಗಳ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತಿದ್ದರೂ ಸಹ, ತಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಎಲ್ಲೆಡೆ ಹೇಳಿಕೊಂಡಿದ್ದರು.
2020ರಲ್ಲಿ ’ಎಸ್‌ಓಎಸ್ ಕೋಲ್ಕತ್ತಾ’ ಎಂಬ ಬೆಂಗಾಲಿ ಚಿತ್ರದಲ್ಲಿ ಯಶ್ ಹಾಗೂ ನುಸ್ರತ್ ಜೊತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಮಿಮಿ ಚಕ್ರಬೊರ್ತಿ ಸಹ ನಟಿಸಿದ್ದಾರೆ.
ಸೋನಂ ಜನ್ಮದಿನದಂದು ಬಾಲ್ಯದ ಫೋಟೋ ಶೇರ್ ಮಾಡಿದ ತಂದೆ ಅನಿಲ್ ಕಪೂರ್
ನುಸ್ರತ್ ಹಾಗೂ ಚಕ್ರಬೊರ್ತಿ ಕ್ರಮವಾಗಿ ಬಶೀರ್‌ಹಾತ್ ಹಾಗೂ ಜಾಧವ್ಪುರ ಕ್ಷೇತ್ರಗಳನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ.
ನುಸ್ರತ್ ಅವರು ನಿಖಿಲ್ ಜೊತೆಗೆ ಟರ್ಕಿಯಲ್ಲಿ 2019ರ ಜೂನ್‌ನಲ್ಲಿ ಮದುವೆ ಮಾಡಿಕೊಂಡಿದ್ದರು.
https://www.instagram.com/p/CGkQCVIFMMc/?utm_source=ig_web_copy_link
https://www.instagram.com/p/CGkPWaOF5DW/?utm_source=ig_web_copy_link
https://www.instagram.com/p/CGgslzjlFrZ/?utm_source=ig_web_copy_link