ಕೆಲ ತಿಂಗಳ ಹಿಂದೆ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೇಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಕೋಮಾಗೆ ಜಾರಿದ್ದಳು. ಚಿಕಿತ್ಸೆ ಫಲಿಸದೇ ಇದೀಗ ಸಾವನ್ನಪ್ಪಿದ್ದು, ಹಾಸ್ಟೇಲ್ ವಾರ್ಡನ್ ಳ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿ ಕೋಮಾಗೆ ಜಾರಿದ್ದ ವಿದ್ಯಾರ್ಥಿನಿ ಮೂರು ತಿಂಗಳ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಕೇರಳದ ಕೋಝಿಕ್ಕೋಡ್ ಹಾಸ್ಟೇಲ್ ನಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೊಟ್ಟಾಯಂ ಮೂಲದ ಚೈತನ್ಯ ಕುಮಾರಿ (20) ಎಂದು ಗುರುತಿಸಲಾಗಿದೆ. ಆಕೆ ಮಂಜೂರ್ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಒಮ್ಮೆ ವಿದ್ಯಾರ್ಥಿನಿ ಹಾಸ್ಟೇಲ್ ನಿಂದ ಹೊರ ಹೋಗಿ ಅನಾರೋಗ್ಯಕ್ಕೀಡಾಗಿದ್ದಳು. ಇದರಿಂದ ಹಾಸ್ಟೇಲ್ ವಾರ್ಡನ್ ರಂಜಿನಿ ವಿದ್ಯಾರ್ಥಿನಿಗೆ ಬೈದಿದ್ದಳು. ಈ ಘಟನೆಯಾದ ಕೆಲ ದಿನಗಳಲ್ಲೇ ವಿದ್ಯಾರ್ಥಿನಿ ಹಾಸ್ಟೇಲ್ ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೋಮಾ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಮೂರು ತಿಂಗಳ ಬಳಿಕ ಸಾವನ್ನಪ್ಪಿದ್ದಾಳೆ.
ವಾರ್ಡನ್ ಮಾನಸಿಕ ಕಿರುಕುಳವೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಲು ಕಾರಣ ಎಂದು ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರಕರಣ ಸಂಬಂಧ ವಾರ್ಡನ್ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.