ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಆತಂಕದ ನಡುವೆಯೇ ನರ್ಸರಿ ಆರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಾಹಿತಿ ನೀಡಿ, ಶೀಘ್ರವೇ ನರ್ಸರಿ ಆರಂಭಿಸಲಾಗುವುದು. ದೆಹಲಿಯಲ್ಲಿ 1700 ಶಾಲೆಗಳಲ್ಲಿ ನರ್ಸರಿ ಪ್ರವೇಶ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ವರ್ಷ ವಿಳಂಬವಾಯಿತು. ಸಾಮಾನ್ಯವಾಗಿ ದೆಹಲಿಯ ಶಾಲೆಗಳಲ್ಲಿ ನವೆಂಬರ್ ಕೊನೆಯ ವಾರದಲ್ಲಿ ನರ್ಸರಿ ಪ್ರವೇಶ ಆರಂಭವಾಗುತ್ತದೆ. ಶಿಕ್ಷಣ ನಿರ್ದೇಶನಾಲಯದ ಮಾರ್ಗಸೂಚಿ ಬಿಡುಗಡೆಯಾದ ನಂತರ ಅಗತ್ಯ ಮಾಹಿತಿ ಒದಗಿಸಲು ಶಾಲೆಗಳನ್ನು ಕೇಳಲಾಗುತ್ತದೆ. ನಂತರ ಡಿಸೆಂಬರ್ ನಲ್ಲಿ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ. ಈ ವರ್ಷ ಯಾವುದೇ ಬೆಳವಣಿಗೆಗಳ ಕಾರಣದಿಂದ 9 ತಿಂಗಳು ಶಾಲೆಗಳನ್ನು ಆರಂಭಿಸಿರಲಿಲ್ಲ. ಈಗ ಶೀಘ್ರವೇ ನರ್ಸರಿಗಳನ್ನು ಕೂಡ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.