
ಐಟಿ ಉದ್ಯೋಗಿಗಳಿಗಾಗಿ ತೆರೆಯಲಾಗಿದ್ದ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಒಬ್ಬರು ಕಟ್ಟಡದ 7ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಈರೋಡ್ ಮೂಲದ ಜಗಶ್ರೀ ಸಾವಿಗೆ ಶರಣಾದವರಾಗಿದ್ದು, ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಐಟಿ ಕಂಪನಿಯ ಕಟ್ಟಡದಲ್ಲಿಯೇ ಇದ್ದ ಆರೋಗ್ಯ ಕೇಂದ್ರದಿಂದ 7ನೇ ಅಂತಸ್ತಿಗೆ ತೆರಳಿ ಅಲ್ಲಿಂದ ಹಾರಿದ್ದಾರೆ.
ದೊಡ್ಡ ಸದ್ದು ಕೇಳಿ ಬಂದ ಕಾರಣಕ್ಕೆ ಹೊರಬಂದು ನೋಡಿದ ವೇಳೆ ಜಗಶ್ರೀ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಸಂಗತಿ ಗೊತ್ತಾಗಿದೆ. ನರ್ಸ್ ಆತ್ಮಹತ್ಯೆ ಕುರಿತಂತೆ ಕೀಳಂಬಾಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಚಂಗಲ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ.