ರಾಯಚೂರು: ನರ್ಸ್ ಒಬ್ಬರು ಆಸ್ಪತ್ರೆಯಲ್ಲಿ ರೋಗಿಗಳಿಂದ ಲಂಚ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ರಾಯಚೂರು ಜಿಲ್ಲೆಯ ಲಿಂಗಸಗೂರು ಆಸ್ಪತ್ರೆಯ ನರ್ಸ್ ಲಂಚಾವತಾರಕ್ಕೆ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಸಹಜ ಹೆರಿಗೆಗೆ ಒಂದು ರೇಟ್, ಸಿಜೇರಿಯನ್ ಗೆ ಒಂದು ರೇಟ್ ಫಿಕ್ಸ್ ಮಾಡಿದ್ದಾರೆ. ಹಣ ಕೊಟ್ಟರೆ ಮಾತ್ರ ಚಿಕಿತ್ಸೆ. ರೋಗಿಯ ಕುಟುಂಬಸ್ಥರೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ ಸಹಜ ಹೆರಿಗೆಗೆ 15000 ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಮೊದಲು 5000 ರೂಪಾಯಿ ನೀಡಲಾಗಿದೆ.
ಚಿಕಿತ್ಸೆ ಬಳಿಕ ಉಳಿದ ಹಣ ನೀಡುವಂತೆ ಆಸ್ಪತ್ರೆ ನರ್ಸ್ ಗಳು ಒತ್ತಾಯಿಸಿದ್ದು, ಹಣ ಪಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಣ ಪಡೆದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.