ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್ಟಿಪಿಸಿ) ಮೈನಿಂಗ್ ಸಿರ್ದಾರ್ ಮತ್ತು ಮೈನಿಂಗ್ ಓವರ್ಮನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎನ್ಟಿಪಿಸಿಯ ಜಾಲತಾಣ ntpc.co.inಗೆ ಭೇಟಿ ಕೊಟ್ಟು ಹೆಚ್ಚಿನ ವಿವರಗಳನ್ನು ತಿಳಿಯಬಹುದಾಗಿದೆ.
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 15, 2022ರ ಕೊನೆಯ ದಿನಾಂಕವಾಗಿದೆ. ಒಟ್ಟು 177 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಮೂರು ವರ್ಷಗಳ ಮಟ್ಟಿಗೆ ಸ್ಥಿರ ಅವಧಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು.
JOB NEWS: 10 ನೇ ಕ್ಲಾಸ್ ಪಾಸಾದವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ; 4,200 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಹಿತಿ
ಹುದ್ದೆಗಳ ವಿವರಗಳು:
ಮೈನಿಂಗ್ ಓವರ್ಮನ್: 74 ಹುದ್ದೆಗಳು
ಮೈನಿಂಗ್ ಸಿರ್ದಾರ್: 103 ಹುದ್ದೆಗಳು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಹಾಗೂ ಕೌಶಲ್ಯಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ, ರಾಂಚಿ, ರಾಯ್ಪುರ ಮತ್ತು ಭುವನೇಶ್ವರದಲ್ಲಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುವುದು.
ಶೈಕ್ಷಣಿಕ ಅರ್ಹತೆ:
ಮೈನಿಂಗ್ ಓವರ್ಮನ್ ಹುದ್ದೆ: ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮೈನಿಂಗ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿದ್ದು, ಕಲ್ಲಿದ್ದಲು ವಿಭಾಗದ ಡಿಜಿಎಂಎಸ್ ವಿತರಿಸಿದ ಸಿಎಂಆರ್ ಅಡಿ ಓವರ್ಮನ್ ಅರ್ಹತೆಯ ಪ್ರಮಾಣಪತ್ರ ಪಡೆದಿರಬೇಕು.
ಮೈನಿಂಗ್ ಸಿರ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು, 10ನೇ ತರಗತಿಯಲ್ಲಿ ತೇರ್ಗಡೆಯಾಗಿ, ಕಲ್ಲಿದ್ದಲು ವಿಭಾಗದ ಡಿಜಿಎಂಎಸ್ ವಿತರಿಸಿದ ಸಿಎಂಆರ್ ಅಡಿ ಓವರ್ಮನ್ ಅರ್ಹತೆಯ ಪ್ರಮಾಣಪತ್ರ ಪಡೆದಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 57 ವರ್ಷಗಳು
ವೇತನ ವಿವರ:
ಮೈನಿಂಗ್ ಓವರ್ಮನ್: 50,000 ರೂ./ಮಾಸಿಕ
ಮೈನಿಂಗ್ ಸಿರ್ದರ್: 40,000 ರೂ./ಮಾಸಿಕ