ಪೆಗಾಸಸ್ ಸ್ಪೈವೇರ್ ತಯಾರಿಸಿದ ಇಸ್ರೇಲಿನ ಸಾಫ್ಟ್ವೇರ್ ಕಂಪನಿ NSO ಭಾರತದಲ್ಲಿ ಸ್ಪೈವೇರ್ ಬೆಳವಣಿಗೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ಕದ್ದಾಲಿಕೆಗೆ ಬಳಕೆ ಮಾಡಿಲ್ಲವೆಂದು ತಿಳಿಸಿದೆ.
ಭಾರತ ಸರ್ಕಾರಕ್ಕೆ ಗೂಢಚರ್ಯೆ ಸಾಫ್ಟ್ವೇರ್ ಮಾರಾಟ ಮಾಡಿರುವುದು ನಿಜ. ಆದರೆ, ಇಂತಹ ವ್ಯಕ್ತಿಗಳ ವಿರುದ್ಧವೇ ಅದನ್ನು ಬಳಕೆ ಮಾಡಬೇಕೆಂದು ನಾವು ನಿರ್ದೇಶನ ನೀಡಿಲ್ಲ. ನೀಡುವುದೂ ಇಲ್ಲವೆಂದು ಹೇಳಲಾಗಿದೆ.
ಪೆಗಾಸಸ್ ಗೂಢಚರ್ಯೆಗೆ ಒಳಪಟ್ಟಿವೆ ಎನ್ನಲಾದ ಭಾರತೀಯರ ಫೋನ್ ನಂಬರ್ ಗಳ ಕುರಿತು ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅವರ ಫೋನ್ ಕದ್ದಾಲಿಕೆ ಮಾಡಲು ಬಳಸಲಾದ ಸಾಫ್ಟ್ವೇರ್ ಕೂಡ ನಮ್ಮದಲ್ಲ ಎಂದು ಪೆಗಾಸಸ್ ಬಗ್ಗೆ ಸಾಫ್ಟ್ ವೇರ್ ತಯಾರಕ ಇಸ್ರೇಲ್ ಕಂಪನಿ NSO ಸ್ಪಷ್ಟಪಡಿಸಿದೆ.
ಇನ್ನು ಪ್ಯಾರಿಸ್ ಮೂಲದ NGO ಪೆಗಾಸಸ್ ಸ್ಪೈವೇರ್ ಗೆ ಒಳಪಟ್ಟಿವೆ ಎನ್ನಲಾದ ವಿಶ್ವದ ಸುಮಾರು 50 ಸಾವಿರ ಪ್ರಮುಖರ ಫೋನ್ ನಂಬರ್ ಗಳನ್ನು ಪಟ್ಟಿ ಮಾಡಿದ್ದು, ಇದು ನಮ್ಮ ಪಟ್ಟಿಯಲ್ಲ, ನಾವು ಅಂತಹ ಪಟ್ಟಿಯನ್ನು ತಯಾರಿಸಿಲ್ಲ. ಇದು ದುರುದ್ದೇಶದಿಂದ ಸಿದ್ಧಪಡಿಸಲಾಗಿದೆ ಎಂದು NSO ಸ್ಪಷ್ಟಪಡಿಸಿದೆ.
ಭಾರತದಲ್ಲಿ ಬಿರುಗಾಳಿ ಎಬ್ಬಿಸಿರುವ ಪೆಗಾಸಸ್ ಸ್ಪೈವೇರ್ ವಿಚಾರಕ್ಕೂ ನಮ್ಮ ಸಾಫ್ಟ್ವೇರ್ ಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.