alex Certify BREAKING NEWS: NSE ಹಗರಣದಲ್ಲಿ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: NSE ಹಗರಣದಲ್ಲಿ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅರೆಸ್ಟ್

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮಕೃಷ್ಣ ಅವರನ್ನು ದೆಹಲಿಯಲ್ಲಿ ಬಂಧಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ನಂತರ ಅವರನ್ನು ಸಿಬಿಐ ಪ್ರಧಾನ ಕಚೇರಿಯಲ್ಲಿ ಲಾಕಪ್‌ ನಲ್ಲಿ ಇರಿಸಲಾಗಿದೆ. ಸಿಬಿಐ ಸತತ ಮೂರು ದಿನಗಳ ಕಾಲ ರಾಮಕೃಷ್ಣ ಅವರನ್ನು ಗ್ರಿಲ್ ಮಾಡಿದೆ. ಅವರ ನಿವಾಸದಲ್ಲಿ ಶೋಧ ನಡೆಸಿದೆ. ಅವರು ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಯು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಹಿರಿಯ ಮನಶ್ಶಾಸ್ತ್ರಜ್ಞರ ಸೇವೆಯನ್ನು ಸಹ ಬಳಸಿಕೊಂಡಿದೆ. ಚಿತ್ರಾ ಬಂಧಿಸುವುದನ್ನು ಬಿಟ್ಟು ಏಜೆನ್ಸಿಗೆ ಯಾವುದೇ ಆಯ್ಕೆ ಇರಲಿಲ್ಲ. ಅವರು ಪ್ರತಿಕ್ರಿಯೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಳು ಎಂಬ ತೀರ್ಮಾನಕ್ಕೆ ಮನಶ್ಶಾಸ್ತ್ರಜ್ಞರು ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ದೆಹಲಿ ಮೂಲದ ಸ್ಟಾಕ್ ಬ್ರೋಕರ್ ವಿರುದ್ಧ 2018 ರಿಂದ ಹಗರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಸೆಬಿ ವರದಿಯ ನಂತರ ಎನ್‌ಎಸ್‌ಇಯ ಆಗಿನ ಉನ್ನತ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತೋರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 25 ರಂದು, ಹಗರಣದ ತನಿಖೆಯನ್ನು ವಿಸ್ತರಿಸಿದ ನಂತರ ಸಿಬಿಐ ಮಾಜಿ ಎನ್‌ಎಸ್‌ಇ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸಿತ್ತು, ಸೆಬಿ ರಾಮಕೃಷ್ಣ ಅವರಿಗೆ 3 ಕೋಟಿ, ಎನ್‌ಎಸ್‌ಇಗೆ ತಲಾ 2 ಕೋಟಿ, ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ರವಿ ನಾರಾಯಣ್‌ಗೆ ತಲಾ 2 ಕೋಟಿ ಮತ್ತು ಮುಖ್ಯ ನಿಯಂತ್ರಣ ಅಧಿಕಾರಿ ಮತ್ತು ಅನುಸರಣೆ ಅಧಿಕಾರಿಯಾಗಿದ್ದ ವಿ.ಆರ್. ನರಸಿಂಹನ್‌ಗೆ 6 ಲಕ್ಷ ರೂಪಾಯಿ ದಂಡ ವಿಧಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...