ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಲಾಕ್ಡೌನ್ ಜಾರಿಯಾದ ಪರಿಣಾಮ ಕೆಲಸ ಮಾಡುತ್ತಿದ್ದ ಸ್ಥಳದಿಂದ ಬಹುತೇಕರು ಊರಿಗೆ ಮರಳಿದ್ದಾರೆ. ಬೆಂಗಳೂರು ತೊರೆದ ಜನ ಹಳ್ಳಿಗಳಿಗೆ ಮರಳಿದ್ದು, ಹೀಗೆ ಊರಿಗೆ ಬಂದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮ ಕೈಗೊಂಡಿದೆ.
ಊರಿಗೆ ಮರಳಿದ ಬಹುತೇಕರು ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಂಡಿದ್ದಾರೆ. ಉದ್ಯೋಗ ಮಾಡುತ್ತಿದ್ದ ಸ್ಥಳದಿಂದ ಊರಿಗೆ ಮರಳಿದವರಿಗೆ ಉದ್ಯೋಗ ಅಗತ್ಯವಿದೆ. ಅವರಿಗೆ ಜಾಬ್ ಕಾರ್ಡ್ ನರೇಗಾ ಯೋಜನೆಯಡಿ ಕೆಲಸ ನೀಡಲು ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದ್ದಾರೆ.
ದುಡಿಮೆ ಮಾಡುತ್ತಿದ್ದ ಸ್ಥಳದಿಂದ ಊರಿಗೆ ಬಂದವರು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡಿದ್ದು ಅವರಿಗೆ ಕೆಲಸ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 71 ಲಕ್ಷ ಜಾಬ್ ಕಾರ್ಡ್ ಗಳಿದ್ದು ಪದವೀಧರರು, ಅತಿಥಿ ಉಪನ್ಯಾಸಕರು, ಶಿಕ್ಷಕರು, ಯುವಕರು, ಪದವೀಧರರು ಕೂಡ ಜಾಬ್ ಕಾರ್ಡ್ ಪಡೆದುಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೆಲಸ ಮಾಡಬೇಕಿದೆ ಎನ್ನಲಾಗಿದೆ.