alex Certify ಪಿಂಚಣಿದಾರರಿಗೆ ಭರ್ಜರಿ ಗುಡ್‌ ನ್ಯೂಸ್: NPS ಸೇರುವ ವಯಸ್ಸಿನಲ್ಲಿ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಚಣಿದಾರರಿಗೆ ಭರ್ಜರಿ ಗುಡ್‌ ನ್ಯೂಸ್: NPS ಸೇರುವ ವಯಸ್ಸಿನಲ್ಲಿ ಹೆಚ್ಚಳ

NPS rules changed: Entry age increased, exit norms revised. Details here

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಪ್ರಸ್ತಾಪ ಮಾಡಿದೆ. 65 ವರ್ಷಗಳ ನಂತರವೂ ಎನ್ ಪಿ ಎಸ್ ಗೆ ಸೇರಬಹುದಾಗಿದೆ.

ಈಗ ಎನ್ ಪಿ ಎಸ್ ಗೆ ಸೇರುವ ವಯಸ್ಸು 65 ರಿಂದ 70 ವರ್ಷಗಳಿಗೆ ಏರಿಕೆಯಾಗಿದೆ. ಪಿಎಫ್‌ಆರ್‌ಡಿಎ ಪ್ರವೇಶ ಮತ್ತು ನಿರ್ಗಮನ ನಿಯಮಗಳನ್ನೂ ಬದಲಾಯಿಸಿದೆ. ಮೊದಲು ಎನ್ ಪಿ ಎಸ್ ನಲ್ಲಿ ಪ್ರವೇಶದ ವಯಸ್ಸು 18 ರಿಂದ 65 ವರ್ಷಗಳಾಗಿತ್ತು. ಇದನ್ನು 18-70 ವರ್ಷಗಳಿಗೆ ಬದಲಾಯಿಸಲಾಗಿದೆ. ಈಗ ಪಿಎಫ್‌ಆರ್‌ಡಿಎ ಸುತ್ತೋಲೆಯ ಪ್ರಕಾರ, 65-70 ವಯೋಮಿತಿಯಲ್ಲಿರುವ ಭಾರತದಲ್ಲಿ ಅಥವಾ ವಿದೇಶದಲ್ಲಿ ನೆಲೆಸಿರುವ ಯಾವುದೇ ಭಾರತೀಯ ನಾಗರಿಕರು ಎನ್‌ಪಿಎಸ್‌ಗೆ ಸೇರಬಹುದು. ಅವರು 75 ವರ್ಷ ವಯಸ್ಸಿನವರೆಗೆ ಈ ಯೋಜನೆಗೆ ಸೇರಬಹುದು.

ಒಂದು ವೇಳೆ ಈಗಾಗಲೇ ಎನ್ ಪಿ ಎಸ್ ಚಂದಾದಾರಿಗೆ ಮುಚ್ಚಿರುವ ಗ್ರಾಹಕರು ಮತ್ತೆ ಇದಕ್ಕೆ ಸೇರಬಹುದಾಗಿದೆ. ಪಿಎಫ್‌ಆರ್‌ಡಿಎ ಪ್ರಕಾರ, 65 ವರ್ಷಗಳ ನಂತರ ಚಂದಾದಾರರು ಎನ್‌ಪಿಎಸ್‌ಗೆ ಸೇರಿಕೊಂಡರೆ ಮತ್ತು ಡೀಫಾಲ್ಟ್ ಆಟೋ ಆಯ್ಕೆಯ ಅಡಿಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರೆ, ಷೇರುಗಳಲ್ಲಿ ಹೂಡಿಕೆ ಮಾಡಲು ಕೇವಲ ಶೇಕಡಾ 15 ರಷ್ಟು ಜನರಿಗೆ ಮಾತ್ರ ಅವಕಾಶವಿದೆ.

ಚಂದಾದಾರರ ನಿಧಿಯು ಐದು ಲಕ್ಷ ರೂಪಾಯಿಗಳು ಅಥವಾ ಅದಕ್ಕಿಂತ ಕಡಿಮೆ ಇದ್ದರೆ,  ಒಂದೇ  ಬಾರಿಗೆ ಎಲ್ಲ ಹಣವನ್ನು ಹಿಂಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...