ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಎಲ್ಲರಿಗೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಎನ್ಪಿಎಸ್ ಅಡಿಯಲ್ಲಿ ಉದ್ಯೋಗದಾತರು ಶೇಕಡ 14 ರಷ್ಟು ಮೊತ್ತವನ್ನು ನೀಡುತ್ತಾರೆ. ಮೊತ್ತವವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDA) ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದೆ.
NPS ಅಡಿಯಲ್ಲಿ ಉದ್ಯೋಗದಾತರು ಶೇಕಡ 14ರಷ್ಟು ಮೊತ್ತ ನೀಡಲಿದ್ದು ಇದಕ್ಕೆ ತೆರಿಗೆ ಇರುವುದಿಲ್ಲ ಎಂಬ ನಿಯಮವನ್ನು 2019 ರ ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಜಾರಿಗೆ ತರಲಾಗಿದೆ. ಇದೇ ನಿಯಮವನ್ನು ಎಲ್ಲರಿಗೂ ವಿಸ್ತರಿಸಲು ಕೋರಲಾಗುವುದು ಎಂದು ಹೇಳಲಾಗಿದೆ.