
ನಿವೃತ್ತಿ ಅಂಚಿನಲ್ಲಿರುವ ಉದ್ಯೋಗಿಗಳು NPS ಖಾತೆ ತೆರೆಯಲು ಬಯಸಿದರೆ ಅವರಿಗೆಲ್ಲ ಗುಡ್ ನ್ಯೂಸ್ ಇದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) NPS ಖಾತೆ ತೆರೆಯುವ ನಿಯಮಗಳನ್ನು ಬದಲಾಯಿಸಿದೆ. ಈಗ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ಕೇಂದ್ರ KYC ಮೂಲಕ ತೆರೆಯಬಹುದು.
PFRDA ನೀಡಿದ ಮಾಹಿತಿಯ ಪ್ರಕಾರ, CKYC ಮೂಲಕ ಸಂಪೂರ್ಣ ಪ್ರಕ್ರಿಯೆಯು ಕಾಗದ ರಹಿತವಾಗಿರುತ್ತದೆ. ವಾಸ್ತವವಾಗಿ ಒಮ್ಮೆ ಮಾತ್ರ KYC ಮಾಡಬೇಕು. ನಂತರ ಹಣಕಾಸು ಸೇವಾ ಸಂಸ್ಥೆಗಳಲ್ಲಿ CKYC ಖಾತೆಯನ್ನು ತೆರೆಯುವುದು ಸುಲಭವಾಗುತ್ತದೆ ಏಕೆಂದರೆ ಹೂಡಿಕೆದಾರರು KYC ಗಾಗಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.
NPS ಖಾತೆ ತೆರೆಯುವುದು ಹೇಗೆ ?
ಸೆಂಟ್ರಲ್ KYC ಬಳಿಕ ನಿಮ್ಮ ಹಣಕಾಸು ಸಂಸ್ಥೆಯಲ್ಲಿ ಮತ್ತೆ ಮತ್ತೆ KYC ಫಾರ್ಮ್ಗಳನ್ನು ಭರ್ತಿ ಮಾಡಲು ನೀವು ಸ್ವತಂತ್ರರಾಗಿರುತ್ತೀರಿ. ಕೆಲವೇ ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಈ ಸೌಲಭ್ಯ ಆರಂಭಿಸಿದೆ. CKYC ಅನ್ನು ಸೆಕ್ಯುರಿಟೈಸೇಶನ್ ಅಸೆಟ್ ರೀ ಕನ್ಸ್ಟ್ರಕ್ಷನ್ನ ಸೆಂಟ್ರಲ್ ರಿಜಿಸ್ಟ್ರಿ ಮತ್ತು ಸೆಕ್ಯುರಿಟಿ ಇಂಟ್ರೆಸ್ಟ್ ಆಫ್ ಇಂಡಿಯಾ ಅಂದರೆ CERSAI ನಿರ್ವಹಿಸುತ್ತದೆ. ಇದರ ಅಡಿಯಲ್ಲಿ, ನಿಮ್ಮ ಸಂಪೂರ್ಣ KYC ಮಾಹಿತಿಯನ್ನು ನೀವು ಕೇವಲ ಒಂದು ಸಂಖ್ಯೆಯಲ್ಲಿ ಪಡೆಯುತ್ತೀರಿ.
1. ಇದಕ್ಕಾಗಿ ನೀವು ಮೊದಲು http://www.camsnps.com ನ ನೋಂದಣಿ ಪುಟಕ್ಕೆ ಹೋಗಿ ಮತ್ತು ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ.
2. ಈಗ ಓಪನ್ ನ್ಯೂ ಅಕೌಂಟ್ ಮೇಲೆ ಕ್ಲಿಕ್ ಮಾಡಿ.
3. ಈಗ ನೀವು ನೀಡಿರುವ ಮೊಬೈಲ್ನಲ್ಲಿ OTP ಬರುತ್ತದೆ, ಅದನ್ನು ನಿರ್ದಿಷ್ಟ ಸ್ಥಳದಲ್ಲಿ ನಮೂದಿಸಿ.
4. PAN, ಜನ್ಮ ದಿನಾಂಕ ಮತ್ತು ಇಮೇಲ್/ಮೊಬೈಲ್ ಸಂಖ್ಯೆ ಹೊಂದಾಣಿಕೆಯಾದರೆ, ನಿಮ್ಮ KYC ವಿವರಗಳು ಪರದೆಯ ಮೇಲೆ ಗೋಚರಿಸುತ್ತವೆ.
5. CKYC ಯಲ್ಲಿ ಲಭ್ಯವಿರುವ ವಿವರಗಳೊಂದಿಗೆ ಮುಂದುವರಿಯಲು ‘ಹೌದು’ ಎಂಬುದನ್ನು ಕ್ಲಿಕ್ ಮಾಡಿ.
6. ಈಗ ಅರ್ಜಿದಾರರ ಪ್ರಕಾರ ಮತ್ತು ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
7. ಇಲ್ಲಿ CKYC ಯಲ್ಲಿ ನೀಡಲಾದ ಜನ್ಮ ದಿನಾಂಕವೂ ಗೋಚರಿಸುತ್ತದೆ. ಇದಲ್ಲದೆ ತಂದೆ, ತಾಯಿಯ ಹೆಸರು ಮತ್ತು ಲಿಂಗ ಇತ್ಯಾದಿಗಳು ಸಹ ದಾಖಲಾಗಿರುತ್ತವೆ.
8. CKYCಯಲ್ಲಿ ಲಭ್ಯವಿರುವ ಗ್ರಾಹಕರ ವಿಳಾಸವನ್ನು, ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತದೆ.
9. ವಿನಂತಿಸಿದ ಎಲ್ಲಾ ಡೇಟಾವನ್ನು ನಮೂದಿಸಿದ ನಂತರ ವಿವರವನ್ನು ಸೇವ್ ಮಾಡಲು ಕ್ಲಿಕ್ ಮಾಡಿ. ನಂತರ ಸ್ವೀಕೃತಿ ಸಂಖ್ಯೆಯನ್ನು ರಚಿಸಲಾಗುತ್ತದೆ.
10. ಈ ಸ್ವೀಕೃತಿ ಸಂಖ್ಯೆಯನ್ನು ಚಂದಾದಾರರಿಗೆ SMS ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ.
11. CKYC ಯಲ್ಲಿ ಲಭ್ಯವಿರುವ ಚಂದಾದಾರರ ಫೋಟೋ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಸಹಿಯು ಸ್ವಯಂ ಜನರೇಟ್ ಆಗುತ್ತದೆ. ಈ ರೀತಿಯಾಗಿ ನೀವು ಮನೆಯಲ್ಲಿಯೇ ಕುಳಿತು ನಿಮ್ಮ NPS ಖಾತೆಯನ್ನು ಸುಲಭವಾಗಿ ತೆರೆಯಬಹುದು.