alex Certify ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ನು ಎಲ್ಲರಿಗೂ ಯುಪಿಐ ಪಾವತಿ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ನು ಎಲ್ಲರಿಗೂ ಯುಪಿಐ ಪಾವತಿ ಸೌಲಭ್ಯ

ನವದೆಹಲಿ: ಇನ್ನು ವಾಟ್ಸಾಪ್ ತಂತ್ರಾಂಶದ ಎಲ್ಲಾ ಬಳಕೆದಾರರು ಅದರಲ್ಲಿರುವ ಯುಪಿಐ ಪಾವತಿ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.

ಭಾರತ ರಾಷ್ಟ್ರೀಯ ಪಾವತಿ ಪ್ರಾಧಿಕಾರ(ಎನ್‌ಸಿಪಿಐ) ಈ ಕುರಿತಾಗಿ ಇದ್ದ ಮಿತಿಯನ್ನು ತೆರವು ಮಾಡಿದೆ. ಇದುವರೆಗೂ ಕೇವಲ 10 ಕೋಟಿ ಬಳಕೆದಾರರಿಗೆ ವಾಟ್ಸಾಪ್ ಪೇಮೆಂಟ್ ಬಳಕೆಗೆ ಅನುಮತಿಸಲಾಗಿತ್ತು. ಗರಿಷ್ಠ ಮಿತಿಯನ್ನು ತೆರವುಗೊಳಿಸಲಾಗಿದ್ದು, ವಾಟ್ಸಾಪ್ ತನ್ನ ಯುಪಿಐ ಪಾವತಿ ಸೇವೆಯನ್ನು ಎಲ್ಲಾ ಬಳಕೆದಾರರಿಗೂ ವಿಸ್ತರಿಸಬಹುದಾಗಿದೆ.

ಆದರೆ ಈ ಸೇವೆ ನೀಡುವಾಗ ಅನ್ವಯವಾಗುವ ಹಾಲಿ ಯುಪಿಐ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಭಾರತ ರಾಷ್ಟ್ರೀಯ ಪಾವತಿ ಪ್ರಾಧಿಕಾರ ಸೂಚನೆ ನೀಡಿದೆ.

ಈ ಬೆಳವಣಿಗೆಯೊಂದಿಗೆ, WhatsApp Pay ಈಗ UPI ಸೇವೆಗಳನ್ನು ತನ್ನ ಸಂಪೂರ್ಣ ಬಳಕೆದಾರರಿಗೆ ವಿಸ್ತರಿಸಬಹುದು. ಈ ಹಿಂದೆ, NPCI ತನ್ನ UPI ಬಳಕೆದಾರರ ನೆಲೆಯನ್ನು ಹಂತ ಹಂತವಾಗಿ ವಿಸ್ತರಿಸಲು WhatsApp Pay ಗೆ ಅನುಮತಿ ನೀಡಿತ್ತು ಎಂದು NPCI ಡಿಸೆಂಬರ್ 31 ರಂದು ಹೇಳಿಕೆಯಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...