ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ಚುರುಕಾಗಿದೆ. ಜನರು ಕೋವಿನ್ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಮಧ್ಯೆ ಅನೇಕ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ನೋಂದಣಿ ಸಮಯದಲ್ಲಿ ವಿವರಗಳನ್ನು ತಪ್ಪಾಗಿ ನಮೂದಿಸಿದ್ದಾರೆ. ಈ ಕಾರಣದಿಂದಾಗಿ ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪು ವಿವರಗಳು ಬರುತ್ತಿದೆ. ಇದ್ರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. cowin.gov.in ನಲ್ಲಿ ಇದನ್ನು ಸರಿಪಡಿಸಬಹುದು.
ಕೊರೊನಾ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಸಮಯದಲ್ಲಿ ಹೆಸರು, ಹುಟ್ಟಿದ ದಿನಾಂಕ ಅಥವಾ ಲಿಂಗ ತಪ್ಪಾಗಿ ಬರೆದಿದ್ದರೆ ಮತ್ತು ಇದು ಲಸಿಕೆ ಪ್ರಮಾಣಪತ್ರದಲ್ಲಿ ತಪ್ಪಾಗಿ ಬಂದರೆ ಅದನ್ನು ಸರಿಪಡಿಸಬಹುದು. cowin.gov.in ನಲ್ಲಿ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗದ ವಿವರಗಳನ್ನು ಒಮ್ಮೆ ಮಾತ್ರ ನವೀಕರಿಸಬಹುದು.
ಕೋವಿನ್ ಪೋರ್ಟಲ್ ಗೆ ಹೋಗಿ ಮೊಬೈಲ್ ಸಂಖ್ಯೆಯನ್ನು ಹಾಕಿ ಲಾಗ್ ಇನ್ ಮಾಡಬೇಕು. ಲಾಗ್ ಇನ್ ಮಾಡಿದ ನಂತರ, Raise an Issue ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಹೆಸರನ್ನು ಆಯ್ಕೆ ಮಾಡಿದ ನಂತರ, ಪ್ರಮಾಣಪತ್ರದಲ್ಲಿ ತಿದ್ದುಪಡಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ಹೆಸರು, ಹುಟ್ಟಿದ ವರ್ಷ ಮತ್ತು ಲಿಂಗದ ಆಯ್ಕೆ ಕೆಳಗೆ ಬರುತ್ತದೆ. ಅಲ್ಲಿ ತಪ್ಪನ್ನು ಸರಿಪಡಿಸಬೇಕಾಗುತ್ತದೆ.