ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ ಕಾರ್ ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯೂ ಗ್ರೂಪ್ ಜನವರಿ 5 ರಂದು ಐಎಕ್ಸ್ ಫ್ಲೋ ಪರಿಚಯಿಸಿದೆ. ಈ ಕಾರು ವಿಶೇಷವಾಗಿದೆ.
ಒಂದು ಬಟನ್ ಒತ್ತಿದರೆ ಅದರ ಬಣ್ಣ ಬದಲಾಗುತ್ತದೆ. ಕಾರಿನ ಬಣ್ಣವನ್ನು ಕಪ್ಪು ಬಣ್ಣದಿಂದ ಬಿಳಿ ಅಥವಾ ಮಿಶ್ರಿತವಾಗಿ ಬದಲಾಗುತ್ತದೆ. ಎಲೆಕ್ಟ್ರೋಫೋರೆಟಿಕ್ ತಂತ್ರಜ್ಞಾನವನ್ನು ಇದಕ್ಕೆ ನೀಡಲಾಗಿದೆ. ಇದರ ಹೊರತಾಗಿ ಈ ಕಾರಿನ ಮೇಲಿರುವ ಗ್ರಾಫಿಕ್ಸ್ ಬಣ್ಣವನ್ನೂ ಬದಲಿಸಬಹುದು.
ಹೊಸ ಐಎಕ್ಸ್ ಫ್ಲೋ ಬಿಎಂಡಬ್ಲ್ಯೂ ಇತ್ತೀಚಿಗೆ ಪರಿಚಯಿಸಿದ 2021 ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿ ಆಧರಿಸಿದೆ. ತಾಪಮಾನದ ಪ್ರಕಾರ, ಈ ಕಾರಿನ ಬಣ್ಣವೂ ಹಗುರವಾಗುತ್ತದೆ. ಇದರಿಂದಾಗಿ ಕಾರಿನೊಳಗೆ ಕುಳಿತವರಿಗೆ ತಾಪಮಾನದ ಸಮಸ್ಯೆ ಕಾಡುವುದಿಲ್ಲ.
ಬಿಎಂಡಬ್ಲ್ಯೂಇಂಡಿಯಾ ಕೆಲವು ದಿನಗಳ ಹಿಂದೆ ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಿ, ದೇಶದ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದೀಗ ಕಂಪನಿಯು ಈ ಕಾರಿನ ಬೆಲೆಯನ್ನೂ ಬಹಿರಂಗಪಡಿಸಿದೆ. ಒಂದೇ ಚಾರ್ಜ್‌ನಲ್ಲಿ 521 ಕಿಲೋಮೀಟರ್ ಓಡುವ ಕಾರಿನ ಬೆಲೆ 1.16 ಕೋಟಿ ರೂಪಾಯಿಯಾಗಿದೆ.