ತನ್ನ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ಖರೀದಿ ಮಾಡಲು ಸೆಪ್ಟೆಂಬರ್ 8ರಿಂದ ಮುಕ್ತವಾಗಿಸಲು ಓಲಾ ಎಲೆಕ್ಟ್ರಿಕ್ ನಿರ್ಧರಿಸಿದೆ.
ವಿಶ್ವ ಎಲೆಕ್ಟ್ರಿಕ್ ವಾಹನ ದಿನವಾದ ಸೆಪ್ಟೆಂಬರ್ 8ರಂದೇ ಈ ಮಹತ್ವದ ಹೆಜ್ಜೆ ಇಡುತ್ತಿರುವ ಓಲಾ, ಪಳೆಯುಳಿಕೆ ಇಂಧನ ಚಾಲಿತ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಪರಿವರ್ತನೆಯಾಗಲು ಉತ್ತೇಜನ ನೀಡಲು ಮುಂದಾಗಿದೆ.
ಎಸ್1 ಸ್ಕೂಟರ್‌ಗಳು 2,999 ರೂ. ಗಳ ಮಾಸಿಕ ಕಂತಿನಲ್ಲಿ ಸಹ ಲಭ್ಯವಿರುವುದಾಗಿ ಓಲಾ ಎಲೆಕ್ಟ್ರಿಕ್ ತಿಳಿಸಿದೆ.
“ನಿಮಗೆ ಸಾಲ ಬೇಕಾಗಿದ್ದಲ್ಲಿ, ಓಲಾ ಫೈನಾನ್ಸ್ ಅಗ್ರ ಬ್ಯಾಂಕಿಂಗ್ ಸೇವೆಗಳಾದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಹಾಗೂ ಟಾಟಾ ಕ್ಯಾಪಿಟಲ್ ಜೊತೆಗೂಡಿದ್ದು ನಿಮ್ಮ ಓಲಾ ಎಸ್1 ಖರೀದಿಗೆ ಆರ್ಥಿಕ ನೆರವು ನೀಡಲಿದೆ” ಎಂದು ಓಲಾ ತಿಳಿಸಿದೆ. ಓಲಾ ಎಸ್1 ಪ್ರೋನ ಮಾಸಿಕ ಕಂತುಗಳು 3,199 ರೂ.ಗಳಿಂದ ಆರಂಭವಾಗಲಿವೆ.
ಮಾರುಕಟ್ಟೆಗೆ ಲಗ್ಗೆಯಿಟ್ಟ ಒಲಾ ಎಲೆಕ್ಟ್ರಿಕ್ ಸ್ಕೂಟರ್: ಖರೀದಿಗೆ ನೆರವಾಗಲು ಬ್ಯಾಂಕ್ ಗಳೊಂದಿಗೆ ಕಂಪನಿ ಒಡಂಬಡಿಕೆ
ಓಲಾ ಹಾಗೂ ಓಲಾ ಎಲೆಕ್ಟ್ರಿಕ್ ಅಪ್ಲಿಕೇಶನ್‌ಗಳ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಪೂರ್ವಾನುಮೋದಿತ ಸಾಲವನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದ ಓಲಾ, ಡಿಜಿಟಲ್ ಕೆವೈಸಿ ಮಾಡಲು ನೆರವಾಗಲಿರುವ ಟಾಟಾ ಕ್ಯಾಪಿಟಲ್ ಹಾಗೂ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗಳು ಅರ್ಹ ಗ್ರಾಹಕರಿಗೆ ತ್ವರಿತ ಸಾಲ ನೀಡಲಿವೆ ಎಂದು ತಿಳಿಸಿದೆ.