ಪಾಸ್ಪೋರ್ಟ್ ತಯಾರಿಸಲು ಇನ್ಮುಂದೆ ಪಾಸ್ಪೋರ್ಟ್ ಕಚೇರಿಗೆ ಹೋಗಬೇಕಾಗಿಲ್ಲ. ಅಂಚೆ ಕಚೇರಿಯಲ್ಲೂ ಈ ಸೇವೆ ಲಭ್ಯವಾಗಲಿದೆ. ಅಂಚೆ ಕಚೇರಿ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ಅದರ ಮೂಲಕ ಸುಲಭವಾಗಿ ಪಾಸ್‌ಪೋರ್ಟ್ ಪಡೆಯಬಹುದು.
ಅಂಚೆ ಕಚೇರಿಯಿಂದಲೇ ಪಾಸ್ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಅಂಚೆ ಕಚೇರಿಯ ಸಾಮಾನ್ಯ ಸೇವಾ ಕೇಂದ್ರ ಕೌಂಟರ್‌ಗೆ ಹೋಗಿ ನೋಂದಾಯಿಸಿ ಅರ್ಜಿ ಸಲ್ಲಿಸಬೇಕು. ಅಂಚೆ ಕಚೇರಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಇನ್ಮುಂದೆ ಪಾಸ್ಪೋರ್ಟ್ ತಯಾರಿಸುವುದು ಸುಲಭ. ಹತ್ತಿರದ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎಂದು ಟ್ವಿಟ್ ಮಾಡಲಾಗಿದೆ.
ಪಾಸ್ಪೋರ್ಟ್ ಸೇವಾ ಕೇಂದ್ರಗಳು ಮತ್ತು ಅಂಚೆ ಕಚೇರಿ ಪಾಸ್ಪೋರ್ಟ್ ಸೇವಾ ಕೇಂದ್ರಗಳು ಪಾಸ್ಪೋರ್ಟ್ ಕಚೇರಿಗಳ ವಿಸ್ತೃತ ಶಾಖೆಗಳಾಗಿದ್ದು, ಪಾಸ್ಪೋರ್ಟ್‌ಗಳ ವಿತರಣೆಗೆ ಸಂಬಂಧಿಸಿದ ಮುಂಭಾಗದ ಸೇವೆಗಳನ್ನು ಒದಗಿಸುತ್ತವೆ. ಈ ಕೇಂದ್ರಗಳು ಟೋಕನ್‌ಗಳನ್ನು ನೀಡುವುದರಿಂದ ಹಿಡಿದು ಪಾಸ್ಪೋರ್ಟ್‌ಗಳ ವಿತರಣೆಗೆ ಅರ್ಜಿ ಸಲ್ಲಿಸುವವರೆಗಿನ ಕಾರ್ಯವನ್ನು ಒಳಗೊಂಡಿರುತ್ತವೆ.
ಪಾಸ್ಪೋರ್ಟ್‌ಗಾಗಿ ಆನ್ಲೈನ್ ನಲ್ಲಿ ನೋಂದಾಯಿಸಿಕೊಂಡ ಮತ್ತು ಅರ್ಜಿ ಸಲ್ಲಿಸಿದ ಜನರು, ಆನ್‌ಲೈನ್ ಅರ್ಜಿ ಸಲ್ಲಿಕೆಯ ನಂತರ ಅರ್ಜಿ ಮುದ್ರಣ ರಶೀದಿ ಮತ್ತು ಮೂಲ ದಾಖಲೆಗಳೊಂದಿಗೆ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಹಾಜರಾಗುವುದು ಕಡ್ಡಾಯವಾಗಿದೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಪಾಸ್ಪೋರ್ಟ್‌ಗೆ ಹೆಸರು ನೋಂದಾಯಿಸಿಕೊಂಡವರು, ಅರ್ಜಿಯ ಮುದ್ರಣ ರಶೀದಿ ಮತ್ತು ಮೂಲ ದಾಖಲೆಗಳೊಂದಿಗೆ ಹತ್ತಿರದ ಅಂಚೆ ಕಚೇರಿಯಲ್ಲಿರುವ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಪಾಸ್ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರ, 10 ನೇ ಮಾರ್ಕ್ ಶೀಟ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಡಿತರ ಚೀಟಿಯ ಅಗತ್ಯವಿದೆ.