alex Certify ವಾಹನ ಸವಾರರಿಗೆ ಖುಷಿ ಸುದ್ದಿ….! ಬೇರೆ ರಾಜ್ಯಕ್ಕೆ ಹೋದಾಗ ಬೇಕಿಲ್ಲ ಹೊಸ ನೋಂದಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಖುಷಿ ಸುದ್ದಿ….! ಬೇರೆ ರಾಜ್ಯಕ್ಕೆ ಹೋದಾಗ ಬೇಕಿಲ್ಲ ಹೊಸ ನೋಂದಣಿ

વ્હીકલ રજિસ્ટ્રેશનને લઈને આવ્યો નવો નિયમ, હવે ભારત સીરિઝ હેઠળ થશે નોંધણી,  જાણો શું છે નિયમો | now there will be registration of vehicles in bharat  series there will be no problem

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ವಾಹನಗಳಿಗಾಗಿ ಭಾರತ್ ಸರಣಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಹೊಸ ವಾಹನಗಳನ್ನು ಬಿಎಚ್ ಸರಣಿಯಲ್ಲಿ ನೋಂದಾಯಿಸಬೇಕಾಗುತ್ತದೆ. ಕೆಲಸದ ಕಾರಣಕ್ಕೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುತ್ತಿರುವ ನೌಕರರಿಗೆ ಇದ್ರಿಂದ ಅನುಕೂಲವಾಗಲಿದೆ.

ಭಾರತ್ ಸರಣಿಯ ಅಡಿಯಲ್ಲಿ ನೋಂದಣಿ ಸಂಖ್ಯೆಯನ್ನು ತೆಗೆದುಕೊಂಡಲ್ಲಿ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವುದು ಸುಲಭವಾಗಲಿದೆ. ಇದ್ರಿಂದ, ವಾಹನ ಮಾಲೀಕರು, ಹೊಸ ರಾಜ್ಯಕ್ಕೆ ಹೋಗುವಾಗ ಹೊಸ ನೋಂದಣಿ ಸಂಖ್ಯೆಯನ್ನು ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ.

ಭಾರತ್ ವಾಹನ ಸರಣಿಯು, ಕೇಂದ್ರ ಸರ್ಕಾರಿ ನೌಕರರು, ಸೇನೆ ಮತ್ತು ಬೇರೆ ಕೆಲಸಕ್ಕೆ  ಸಂಬಂಧಿಸಿದಂತೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವ ವಾಹನ ಸವಾರರಿಗೆ ಪ್ರಯೋಜನ ನೀಡಲಿದೆ. ಬಿಎಚ್ ವಾಹನ ಸರಣಿಯ ಅನುಷ್ಠಾನದ ನಂತರ, ವಾಹನಕ್ಕಾಗಿ ಪದೇ ಪದೇ ನೋಂದಣಿ ಸಂಖ್ಯೆಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಬೇರೆ ರಾಜ್ಯದಲ್ಲಿಯೂ ಹಳೆ ನೋಂದಣಿಯಲ್ಲಿಯೇ ವಾಹನ ಚಲಾಯಿಸಬಹುದು.

ಬಿಎಚ್ ನೋಂದಣಿಯ ಸ್ವರೂಪ YY BH 5529 XX YY ಆಗಿರಲಿದೆ. ಈ ಸರಣಿಯಲ್ಲಿ  ಮೋಟಾರು ವಾಹನ ತೆರಿಗೆಯನ್ನು ಎರಡು ವರ್ಷಗಳವರೆಗೆ ಅಥವಾ 4, 6, 8 ವರ್ಷಗಳವರೆಗೆ ವಿಧಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...