ನವದೆಹಲಿ: ಗರ್ಭಿಣಿಯರು ಕೂಡ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನೀತಿ ಆಯೋಗದ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಗರ್ಭಿಣಿಯರು ಕೂಡ ಲಸಿಕೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ರೋಗ ನಿರೋಧಕ ಶಕ್ತಿ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳನ್ನು ಆರೋಗ್ಯ ಸಚಿವಾಲಯ ಒಪ್ಪಿದೆ. ಕೋವಿಡ್ -19 ವಿರುದ್ಧ ಗರ್ಭಿಣಿಯರಿಗೆ ಲಸಿಕೆ ಹಾಕಲು ಅನುಮೋದನೆ ನೀಡಿದೆ.
ಗರ್ಭಿಣಿಯರು ಈಗ ಲಸಿಕೆ ಪಡೆಯಲು ಕೋ -ವಿನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಕಾಲಿಡಬಹುದು ಎಂದು ಸಚಿವಾಲಯ ಹೇಳಿದೆ.