ವಿದೇಶದಲ್ಲಿ ಮದುವೆ ಆಗುವ ಭಾರತೀಯರ ಸಂಖ್ಯೆ ದೊಡ್ಡದಿದೆ. ಸೆಲೆಬ್ರಿಟಿಗಳು, ಸಿನಿಮಾ ಕಲಾವಿದರು ವಿದೇಶದಲ್ಲಿ ಮದುವೆ ಮಾಡಿಕೊಳ್ತಾರೆ. ಆದ್ರೆ ಈ ಬಾರಿ ಜನರ ಆಲೋಚನೆ ಬದಲಾಗಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ಆಸೆಯಂತೆ ಜೀವಿಸಲು ಬಯಸಿದ್ದಾರೆ. ಮೋದಿ ಕೋರಿಕೆಯ ಮೇರೆಗೆ ತಮ್ಮ ಮದುವೆಯನ್ನು ವಿದೇಶದ ಬದಲು ನಮ್ಮ ದೇಶದಲ್ಲೇ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಕೆಲವು ದಿನಗಳ ಹಿಂದೆ, ʼಮನ್ ಕಿ ಬಾತ್ʼ ನಲ್ಲಿ ವಿದೇಶಗಳಲ್ಲಿ ಮದುವೆಗಳನ್ನು ಆಯೋಜಿಸುವ ಕುಟುಂಬಗಳನ್ನು ಪ್ರಧಾನಿ ಪ್ರಶ್ನಿಸಿದ್ದರು. ಭಾರತದಲ್ಲಿ ಅಂತಹ ಸಮಾರಂಭಗಳನ್ನು ಆಯೋಜಿಸುವಂತೆ ಒತ್ತಾಯಿಸಿದ್ದರು. ಅವರ ಮನವಿಯ ಪರಿಣಾಮ ಈಗ ಗೋಚರಿಸುತ್ತದೆ. ಈ ಬಾರಿ ದೇಶದಲ್ಲಿ 42 ಲಕ್ಷಕ್ಕೂ ಹೆಚ್ಚು ಮದುವೆ ನಡೆಯುವ ಸಾಧ್ಯತೆ ಇದೆ. ಸಂಘಟನೆಯೊಂದು ಈ ಬಗ್ಗೆ ಮಾಹಿತಿ ನೀಡಿದೆ. ಅದ್ರ ಪ್ರಕಾರ, ಆರು ತಿಂಗಳಲ್ಲಿ ನಡೆಯುವ ಇಷ್ಟು ಮದುವೆಯಿಂದ 1.5 ಲಕ್ಷ ಕೋಟಿ ವ್ಯಾಪಾರ ನಡೆಯಲಿದೆ. ಇದ್ರಿಂದಾಗಿ ಅನೇಕ ವ್ಯಾಪಾರಿಗಳಿಗೆ ಲಾಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು, ನಾವು ಭಾರತದ ನೆಲದಲ್ಲಿ, ಭಾರತದ ಜನರ ಮಧ್ಯೆ ಮದುವೆ ಮಾಡಿಕೊಂಡಲ್ಲಿ ದೇಶದ ಹಣವು ದೇಶದಲ್ಲಿ ಉಳಿಯುತ್ತದೆ. ದೇಶದ ಜನರಿಗೆ ನಿಮ್ಮ ಮದುವೆಯಲ್ಲಿ ಏನಾದರೂ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದಿದ್ದರು. ʼಲೋಕಲ್ ಫಾರ್ ವೋಕಲ್ʼ ಧ್ಯೇಯವನ್ನು ಇದಕ್ಕೂ ವಿಸ್ತರಿಸಬಹುದು. ಯಾಕೆ ನಮ್ಮ ದೇಶದಲ್ಲೇ ಮದುವೆ ಆಗಬಾರದು ಎಂದು ಪ್ರಶ್ನಿಸಿದ್ದರು.