alex Certify ಪ್ರಯಾಣಿಕರಿಗೆ ಮತ್ತೊಂದು ಶಾಕ್…!‌ ಮೇಲ್ದರ್ಜೆಗೇರಿದ ನಿಲ್ದಾಣಗಳಿಂದ ರೈಲು ಹತ್ತಲು ಹೆಚ್ಚುವರಿ ಶುಲ್ಕದ ಬರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಮತ್ತೊಂದು ಶಾಕ್…!‌ ಮೇಲ್ದರ್ಜೆಗೇರಿದ ನಿಲ್ದಾಣಗಳಿಂದ ರೈಲು ಹತ್ತಲು ಹೆಚ್ಚುವರಿ ಶುಲ್ಕದ ಬರೆ

ದೇಶಾದ್ಯಂತ ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುತ್ತಿರುವುದು ಸಂತಸದ ವಿಚಾರವೇನೋ ಸರಿ. ಆದರೆ ಈ ಒಂದು ಕಡೆ ಈ ಸೌಲಭ್ಯ ಕೊಟ್ಟು ಮತ್ತೊಂದೆಡೆ ಅದಕ್ಕೆ ಸಾರ್ವಜನಿಕರಿಂದ ದುಡ್ಡು ಕೀಳುವ ಕಾಯಕಕ್ಕೆ ರೈಲ್ವೇ ಇಲಾಖೆ ನಿಂತಂತಿದೆ.

ಮರು ಅಭಿವೃದ್ಧಿ ಹೊಂದಿದ ಹಾಗೂ ಸಜ್ಜಾಗುತ್ತಿರುವ ರೈಲ್ವೇ ನಿಲ್ದಾಣಗಳಿಂದ ರೈಲುಗಳನ್ನು ಏರಲು ಪ್ರಯಾಣಿಕರು ಇನ್ನು ಮುಂದೆ ಹೆಚ್ಚುವರಿ ದುಡ್ಡು ಪೀಕಬೇಕಾಗುತ್ತದೆ.

ಈ 8 ಉಡುಪುಗಳು ಹುಡುಗಿಯರ ವಾರ್ಡ್ರೋಬ್ ನಲ್ಲಿದ್ದರೆ ರೆಡಿಯಾಗಲು 5 ನಿಮಿಷ ಸಾಕು

ಫ್ಲೈಟ್‌ ಟಿಕೆಟ್ ಬುಕಿಂಗ್ ಮಾಡುವ ವೇಳೆ ಕಟ್ಟುವಂತೆ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಇನ್ನು ಮುಂದೆ ರೈಲ್ವೇ ಪ್ರಯಾಣಿಕರೂ ಸಹ ಭರಿಸಬೇಕಾಗುತ್ತದೆ.

ಪ್ರಥಮ ದರ್ಜೆ ಎಸಿ, ಎಸಿ-3 ಮತ್ತು ಎಸಿ-3 ಟಯರ್‌ ಹಾಗೂ ಸ್ಲೀಪರ್‌ ಟಿಕೆಟ್‌ಗಳ ಮೇಲೆ ವಿವಿಧ ಹಂತಗಳ ಶುಲ್ಕವನ್ನು ಪ್ರಯಾಣಿಕರು ಭರಿಸಬೇಕಾಗುತ್ತದೆ.

ರಾಜ್ಯದ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆ ಸೌಲಭ್ಯದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮರು ಜಾರಿ ಸಾಧ್ಯತೆ

ಈ ಸಂಬಂಧ ರೈಲ್ವೇ ಇಲಾಖೆ ಶೀಘ್ರವೇ ನೋಟಿಫಿಕೇಶನ್ ಹೊರಡಿಸಲಿದ್ದು, ರೈಲ್ವೇ ನಿಲ್ದಾಣಗಳ ಅಭಿವೃದ್ಧಿಯತ್ತ ಖಾಸಗಿ ಕ್ಷೇತ್ರವನ್ನು ಇನ್ನಷ್ಟು ಸೆಳೆಯುವ ಯತ್ನ ಇದಾಗಿದೆ ಎನ್ನಲಾಗಿದೆ. ಈ ಸಂಬಂಧ ಮುಂದಿನ 4-5 ದಿನಗಳಲ್ಲಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...