
ಪರಿಷ್ಕರಿಸಿದ ಹುದ್ದೆಯ ಹೆಸರು ಚಾಲ್ತಿಯಲ್ಲಿರುವ ಹೊಣೆಗಾರಿಕೆ ಆಧರಿತವಾಗಿದ್ದು, ಟ್ರೇನ್ ಮ್ಯಾನೇಜರ್ ಎಂದು ಕರೆಯಿಸಿಕೊಳ್ಳುವುದು ’ಗಾರ್ಡ್’ ಎನಿಸಿಕೊಳ್ಳುವುದಕ್ಕಿಂತ ಬಹಳ ಹೆಚ್ಚಿನ ವೃತ್ತಿ ಘನತೆ ತಂದುಕೊಟ್ಟ ಭಾವವನ್ನೂ ಮೂಡಿಸುತ್ತಿದೆ ಎಂದು ಭಾರತೀಯ ರೈಲ್ವೇ ಟ್ವೀಟ್ನಲ್ಲಿ ತಿಳಿಸಿದೆ.
ಹುದ್ದೆ ಹೆಸರಿನ ಬದಲಾವಣೆಯಿಂದ ವೇತನ ಮಟ್ಟಗಳಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ನೇಮಕಾತಿ, ಚಾಲ್ತಿಯಲ್ಲಿರುವ ಕರ್ತವ್ಯ ಹಾಗೂ ಹೊಣೆಗಾರಿಕೆಗಳು, ಬಡ್ತಿ ಮಾನದಂಡಗಳಲ್ಲಿ ಸಹ ಯಾವುದೇ ಮಾರ್ಪಾಡುಗಳು ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಸಹಾಯಕ ಗಾರ್ಡ್ ಆಗಿದ್ದವರು ಇನ್ನು ಮುಂದೆ ಪ್ರಯಾಣಿಕ ರೈಲಿನ ಸಹಾಯಕ ಮ್ಯಾನೇಜರ್ ಎನಿಸಿಕೊಳ್ಳಲಿದ್ದು, ಸರಕು ರೈಲಿನ ಗಾರ್ಡ್ಗಳು ಇನ್ನು ಮುಂದೆ ಸರಕು ರೈಲಿನ ಮ್ಯಾನೇಜರ್ಗಳು ಎನಿಸಿಕೊಳ್ಳಲಿದ್ದಾರೆ.