ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಈಗ ಕೆಲವೇ ಸೆಕೆಂಡುಗಳಲ್ಲಿ ವಾಟ್ಸಾಪ್ ಮೂಲಕ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
ಹಲವಾರು ರಾಜ್ಯಗಳು ಅಂತಾರಾಜ್ಯ ಪ್ರಯಾಣಕ್ಕಾಗಿ ಲಸಿಕೆ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕೆಂದು ಹೇಳಿದ್ದು, ಅನೇಕ ಸಂಸ್ಥೆಗಳಲ್ಲಿ ಕೂಡ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಇಂತಹ ಸಮಯದಲ್ಲಿ ಲಸಿಕೆಯ ಪುರಾವೆಗಳನ್ನು ಹೊಂದಿದ್ದರೆ ಜನರಿಗೆ ಅನುಕೂಲವಾಗುಲಿದೆ. ವಾಟ್ಸಾಪ್ ಆಯ್ಕೆಯು ಈಗ ಜನರಿಗೆ ಕೊವಿನ್ ಲಸಿಕೆ ಪೋರ್ಟಲ್‌ನಿಂದ ಪ್ರಮಾಣಪತ್ರಗಳನ್ನು ಪಡೆಯಲು ಸುಲಭವಾದ ಪರ್ಯಾಯ ಮಾರ್ಗವನ್ನು ಒದಗಿಸಿದೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರ ಕಚೇರಿಯು ನೀಡಿರುವ ಮಾಹಿತಿ ಅನ್ವಯ, ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಬಯಸುವ ಯಾರಾದರೂ ವಾಟ್ಸಾಪ್ ಸಂದೇಶವನ್ನು ಸಂಖ್ಯೆಗೆ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.
“ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾನ್ಯ ಮನುಷ್ಯನ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಈಗ #COVID19 ಲಸಿಕೆ ಪ್ರಮಾಣಪತ್ರವನ್ನು MyGov Corona Helpdesk ಮೂಲಕ 3 ಸುಲಭ ಹಂತಗಳಲ್ಲಿ ಪಡೆಯಿರಿ. ಸಂಪರ್ಕ ಸಂಖ್ಯೆ ಉಳಿಸಿ: +91 9013151515. WhatsApp ನಲ್ಲಿ ‘ಕೋವಿಡ್ ಪ್ರಮಾಣಪತ್ರ’ ಎಂದು ಟೈಪ್ ಮಾಡಿ ಮತ್ತು ಕಳುಹಿಸಿ. OTP ನಮೂದಿಸಿ. ನಿಮ್ಮ ಪ್ರಮಾಣಪತ್ರವನ್ನು ಸೆಕೆಂಡುಗಳಲ್ಲಿ ಪಡೆಯಿರಿ ಎಂದು ಆರೋಗ್ಯ ಸಚಿವರ ಕಚೇರಿ ಟ್ವೀಟ್ ಮಾಡಿದೆ.
ಆದಾಗ್ಯೂ, ಪ್ರಕ್ರಿಯೆಯ ಅನ್ವಯ ಪ್ರಯತ್ನಿಸಿದ ಹಲವಾರು ಜನರು ಅವರು ತಪ್ಪು ಫಲಿತಾಂಶಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಪ್ರಮಾಣಪತ್ರವು ಎರಡೂ ಡೋಸ್‌ಗಳಿಗೆ ಒಂದೇ ದಿನಾಂಕವನ್ನು ಉಲ್ಲೇಖಿಸಿದೆ ಎಂದು ಕೆಲವರು ಹೇಳಿದ್ದಾರೆ. ಇತರರು ಎರಡೂ ಡೋಸ್ ಪಡೆದಿದ್ದರೂ ಲಸಿಕೆ ಹಾಕಿಲ್ಲ ಎಂದು ಮಾಹಿತಿ ನೀಡಲಾಗಿದೆ ಎಂದು ದೂರಿದ್ದಾರೆ.
ಸಚಿವಾಲಯದ ಇತ್ತೀಚಿನ ನಡೆಗೆ ರಾಜಕೀಯ ಹಾದಿಯಲ್ಲಿ ಮೆಚ್ಚುಗೆಯ ಮಾತುಗಳೂ ಸಿಕ್ಕಿವೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಈ ಪ್ರಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸರಳ ಮತ್ತು ವೇಗವಾಗಿದೆ ಎಂದು ವಿವರಿಸಿದ್ದಾರೆ.
ನಾನು ಇಂತಹ ಕಾರ್ಯಗಳಿಗೆ ಯಾವಾಗಲು ಸರ್ಕಾರವನ್ನು ಪ್ರಶಂಸಿಸುತ್ತೇನೆ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು @WhatsApp ನಿಂದ ಮರಳಿ ಪಡೆಯಿರಿ. ಸರಳ ಮತ್ತು ವೇಗವಾಗಿ !, ಎಂದು ಅವರು ಟ್ವಿಟರ್ ಪೋಸ್ಟ್ ನಲ್ಲಿ ಹೇಳಿದ್ದಾರೆ.