ಬೆಸ್ಕಾಂ ಸೇರಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳು (ಎಸ್ಕಾಂಗಳು) ಇನ್ನು ಮುಂದೆ ನಿಯಮಗಳ ಅನುಸಾರ ವಿದ್ಯುತ್ ಪೂರೈಕೆ ಮಾಡಲು ವಿಫಲವಾದಲ್ಲಿ ಪ್ರತಿನಿತ್ಯ 1000 ರೂ.ಗಳಂತೆ ಪರಿಹಾರ ನೀಡಬೇಕಾಗುತ್ತದೆ.
ಗ್ರಾಹಕರಿಗೆ ಅಧಿಕಾರ ಕೊಡುವ ಮಹತ್ವದ ಹೆಜ್ಜೆಯೊಂದರಲ್ಲಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಸಮಿತಿ (ಕೆಇಆರ್‌ಸಿ) ತನ್ನ ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಬಗ್ಗೆ ತಿಳುವಳಿಕೆ ಹೊರಡಿಸಿದ್ದು, 30 ದಿನಗಳ ಒಳಗೆ ಸಾರ್ವಜನಿಕರ ಪ್ರತಿಕ್ರಿಯೆ ಕೋರಿದೆ.
ಕೆಇಆರ್‌ಸಿ (ವಿದ್ಯುತ್ ಗ್ರಾಹಕರ ಹಕ್ಕುಗಳು, ಪರವಾನಿಗೆದಾರರ ಮಾನದಂಡಗಳ ಪ್ರದರ್ಶನದ ಅನುಸಾರ ವಿದ್ಯುತ್ ಪೂರೈಕೆ ಮಾಡುವ ಕರ್ತವ್ಯ) ನಿಯಂತ್ರಣ, 2021, ಗ್ರಾಹಕರು ಸಂತುಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಈ ಡಿಜಿಟಲ್ ಕಾಲದಲ್ಲಿ ಎಸ್ಕಾಂಗಳಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರಲು ನೋಡುತ್ತಿದೆ.
ಖಾತ್ರಿಪಡಿಸಿದ ಮಟ್ಟಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ವಿಫಲವಾದಲ್ಲಿ ತನ್ನಿಂತಾನೇ ಪರಿಹಾರದ ಪಾವತಿ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯನ್ನೂ ನಿಯಮಗಳು ಒಳಗೊಂಡಿವೆ. ಇದಕ್ಕಾಗಿ ಮಸೂದೆಯಲ್ಲಿ ತಿಳಿಸುವ ನಿಯಮಗಳು ಎಸ್ಕಾಂಗಳಿಗೆ ಪಾಲಿಸಬೇಕಾದ ಕರ್ತವ್ಯಗಳನ್ನು ಪರಿಚಯಿಸಿ, ಹೊಸ ಸಂಪರ್ಕ/ ಲೋಡ್‌ನ ಸುಧಾರಣೆ/ಮಾರ್ಪಾಡು ಮಾಡಲು ಕೋರಿ ಸಲ್ಲಿಸಲಾಗುವ ಅರ್ಜಿಗೆ ಸ್ವೀಕೃತಿ ನೀಡುವುದರಿಂದ ಹಿಡಿದು, ಇಂಥ ಮನವಿಗಳನ್ನು ಪೂರೈಸಲು ತೆಗೆದುಕೊಳ್ಳುವ ಕಾಲಮಿತಿಯವರೆಗೂ ನಿಯಮಗಳನ್ನು ಇದರಲ್ಲಿ ಸೇರಿಸಲಾಗಿದೆ.
ಅಪ್ಪನ ಕೈ ಹಿಡಿದಿರುವ ಮಗನ ಫೋಟೋ ಶೇರ್ ಮಾಡಿಕೊಂಡ ನಟಿ ನುಸ್ರತ್ ಜಹಾನ್
ಹೊಸ ಉಪಸ್ಟೇಷನ್ ಅಥವಾ ಅಸ್ತಿತ್ವದಲ್ಲಿರುವ ಮೇನ್‌ಗಳ ವಿಸ್ತರಣೆ ಅಗತ್ಯವಿಲ್ಲದ ಜಾಗಗಳಲ್ಲಿ; ಮೆಟ್ರೋ ಪ್ರದೇಶದಲ್ಲಿ, ಎಸ್ಕಾಂಗಳು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ವಿದ್ಯುತ್ ಪೂರೈಸಬೇಕು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 30 ದಿನಗಳ ಒಳಗೆ ಈ ಕೆಲಸ ಮಾಡಬೇಕಾಗುತ್ತದೆ.
ಮೂಲ ಸೌಕರ್ಯ ಹೊಸದಾಗಿ ನಿರ್ಮಿಸಬೇಕಾದ ಪರಿಸ್ಥಿತಿಯಲ್ಲಿ ಅಧಿಕಾರಿಗಳು 45-180 ದಿನಗಳ ಒಳಗೆ, ಲೋಡ್ ಅವಲಂಬಿಸಿ, ವಿದ್ಯುತ್ ಪೂರೈಕೆ ಖಾತ್ರಿ ಪಡಿಸಬೇಕಾಗುತ್ತದೆ. ಈ ನಿಯಮಕ್ಕೆ ಬದ್ಧರಾಗಲು ವಿಫಲರಾದಲ್ಲಿ ಎಸ್ಕಾಂಗಳಿಂದ ತಡವಾಗುವ ಪ್ರತಿ ದಿನಕ್ಕೂ 1000 ರೂ.ಗಳಂತೆ ದಂಡ ಪಾವತಿ ಮಾಡಬೇಕಾಗುತ್ತದೆ.
24×7 ವಿದ್ಯುತ್ ಪೂರೈಕೆ ಮಾಡಲು ಆದ್ಯತೆ ನೀಡಲು ಸೂಚಿಸುವ ನಿಯಮಗಳು, ಸಮಿತಿಯೊಂದರ ಮುಖಾಂತರ ಕೃಷಿ ಪ್ರಧಾನ ಗ್ರಾಹಕರಿಗೆ ’ಕಡಿಮೆ ಗಂಟೆಗಳನ್ನು’ ನಿಗದಿ ಪಡಿಸಲು ಕೋರಿವೆ.
ವಿದ್ಯುತ್ ಪೂರೈಕೆಯ ಸ್ಥಗಿತಗೊಂಡ ಅವಧಿ ಹಾಗೂ ಎಷ್ಟು ಬಾರಿ ಹೀಗಾಗುತ್ತಿದೆ ಎಂದು ಲೆಕ್ಕ ಹಾಕಲು ಪ್ರಕ್ರಿಯೆಯೊಂದನ್ನು ಪರಿಚಯಿಸಲು ಕೆಇಆರ್‌ಸಿ ಕೋರಿದ್ದು, ಈ ಸಂಬಂಧ 3-10 ನಿಮಿಷಗಳನ್ನು ಕನಿಷ್ಠ ಅವಧಿ ಎಂದು ಲೆಕ್ಕಾಚಾರ ಮಾಡಲು ಅವಕಾಶ ನೀಡಲು ಕೋರಿದೆ.
“ಅಲ್ಪಾವಧಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದರಿಂದ ಫ್ಯೂಸ್‌ಗಳು ಹಾಗೂ ಸ್ಟೆಬಿಲೈಜ಼ರ್‌ಗಳು ಡ್ಯಾಮೇಜ್ ಆಗುತ್ತವೆ. ಎಸ್ಕಾಂಗಳು ಅಪರೂಪದ ನಿದರ್ಶನಗಳಲ್ಲಿ ಯಾವಾಗ ವಿದ್ಯುತ್ ಕಡಿತಗೊಳಿಸುತ್ತವೆ ಎಂದು ಗ್ರಾಹಕರು ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೆ ಅನಿರ್ದಿಷ್ಟವಾಗಿ ವಿದ್ಯುತ್ ಕಡಿತವಾಗುವುದು ದೊಡ್ಡ ಸಮಸ್ಯೆಯಾಗಿದ್ದು, ಇನ್ನಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ,” ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.