
ಭಾರತದಲ್ಲಿ ಎಲೆಕ್ಟ್ರಿಕ್ ಬೈಕುಗಳ ಟ್ರೆಂಡ್ ಶುರುವಾಗಿದೆ. ಹೆಚ್ಚಾಗುತ್ತಿರುವ ಸಬ್ಸಿಡಿ ಹಾಗೂ ಇಂಧನ ಬೆಲೆಯಿಂದ ಗ್ರಾಹಕರು ಎಲೆಕ್ಟ್ರಿಕ್ ಬೈಕುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಸೆಮಿಕಂಡಕ್ಟರ್ಸ್ ಕೊರತೆಯಿಂದ ಎಲೆಕ್ಟ್ರಿಕ್ ವಾಹನಗಳನ್ನ ಬುಕ್ ಮಾಡಿದರೆ ಅವುಗಳನ್ನ ಪಡೆಯಲು ತಿಂಗಳುಗಳ ಕಾಲ ಕಾಯಬೇಕು. ಇದಕ್ಕೊಂದು ಪರಿಹಾರ ನೀಡಿರುವ ಮಹಾರಾಷ್ಟ್ರ ಮೂಲದ ಗೋಗೋವಾ1 ನಿಮ್ಮ ಬಳಿ ಇರುವ ಅವೆಂಜರ್ ಬೈಕನ್ನು, ಎಲೆಕ್ಟ್ರಿಕ್ ಬೈಕಾಗಿ ಪರಿವರ್ತಿಸುವ ಕಿಟ್ ಪರಿಚಯಿಸಿದೆ.
ಹೌದು, ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್(Electric Bike) ಆಗಿ ಪರಿವರ್ತಿಸಬಲ್ಲ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಪೆಟ್ರೋಲ್ ಎಲೆಕ್ಟ್ರಿಕ್ ಹೈಬ್ರಿಡ್ ಕಿಟ್ ಅಭಿವೃದ್ಧಿಪಡಿಸಲಾಗಿದ್ದು, ಈ ಕಿಟ್ ಮೂಲಕ ಬಜಾಜ್ ಅವೆಂಜರ್ ಬೈಕ್‌ನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲಾಗಿದೆ.
ಇತರ ಎಲ್ಲಾ ಎಲೆಕ್ಟ್ರಿಕ್ ಕನ್ವರ್ಟ್ ಕಿಟ್‌ಗಿಂತ ಈ ಕಿಟ್ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಕಿಟ್ ಅಳವಡಿಸಿದರೆ ಬೈಕ್ ಎಲೆಕ್ಟ್ರಿಕ್ ಬೈಕ್ ಆಗಿ ರೈಡ್ ಮಾಡಬಹುದು. ಇನ್ನು ಅಗತ್ಯಬಿದ್ದರೆ ಪೆಟ್ರೋಲ್ ವಾಹನವನ್ನಾಗಿಯೂ ಬಳಕೆ ಮಾಡಬಹುದು. ಹೀಗಾಗಿ ಇದನ್ನ ಎಲೆಕ್ಟ್ರಿಕ್ ಕನ್ವರ್ಷನ್ ಕಿಟ್ ಎನ್ನದೇ, ಪೆಟ್ರೋಲ್ ಹೈಬ್ರಿಡ್ ಕಿಟ್ ಎನ್ನಲಾಗುತ್ತಿದೆ. ಅಲ್ಲದೇ, ಲಾಂಗ್ ರೈಡ್ ಮಾಡಲು ಹಾಗೂ ನಗರ ಪ್ರಯಾಣ ಎರಡಕ್ಕೂ ಹೊಂದಿಕೊಳ್ಳುವಂತೆ ಕಿಟ್ ಅಭಿವೃದ್ಧಿಪಡಿಸಲಾಗಿದೆ.
ಬಜರಂಗದಳ ಹರ್ಷ ನಿವಾಸಕ್ಕೆ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಗಣ್ಯರ ಭೇಟಿ, ಸಾಂತ್ವನ
ಇದು ಮೊದಲೇ ಹೇಳಿದಂತೆ, ಪೆಟ್ರೋಲ್ ಎಲೆಕ್ಟ್ರಿಕ್ ಹೈಬ್ರಿಡ್ ಕಿಟ್ ಆಗಿದೆ. ಈ ಕನ್ವರ್ಟ್ ಕಿಟ್‌ನಲ್ಲಿ 72V, 35A ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದು ಸಣ್ಣ ಬ್ಯಾಟರಿಯಾಗಿದ್ದು, ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 40 ರಿಂದ 50 ಕಿ.ಮೀ ಮೈಲೇಜ್ ನೀಡಲಿದೆ. ಎಲೆಕ್ಟ್ರಿಕ್ ಮೋಟಾರ್ ಮೂಲಕ ಗಂಟೆಗೆ 60 ಕಿ.ಮೀ ವೇಗದಲ್ಲಿ ಪ್ರಯಾಣ ಮಾಡಲು ಸಾಧ್ಯವಿದೆ.
ಈ ಕನ್ವರ್ಟರ್ ಕಿಟ್ ಆನ್‌ಲೈನ್ ಮೂಲಕ ಖರೀದಿಸಲು ಸಾಧ್ಯವಿದೆ. 27,760 ರೂಪಾಯಿಗೆ ಕಿಟ್ ಲಭ್ಯವಿದೆ. GoGoA1 ಸೋರ್ಸ್ ಮೂಲಕ ಈ ಕಿಟ್ ಖರೀದಿಸಬಹುದು. ಕಂಪನಿಯೇನೊ ಈ ಕಿಟ್ ಆರ್‌ಟಿಓ ಅನುಮತಿ ನೀಡಿರುವ ಕಿಟ್ ಎಂದು ಹೇಳಿಕೊಂಡಿದೆ. ಆದರೆ, ಇದಕ್ಕೆ ನಿಜವಾಗಲೂ ಆರ್‌ಟಿಓ ಅನುಮತಿ ಸಿಕ್ಕಿದೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.