
ತಾನು ಉತ್ಪಾದಿಸುವ ಕೋವಿಡ್-19 ಲಸಿಕೆಗಳು 12-17 ವರ್ಷ ವಯೋಮಾನದ ಮಕ್ಕಳಿಗೆ ಸುರಕ್ಷಿತ ಹಾಗೂ ಪ್ರಭಾವಿಯಾಗಿದೆ ಎಂದು ನೋವಾವ್ಯಾಕ್ಸ್ ಹೇಳಿಕೊಂಡಿದೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಲಸಿಕೆಗಳಿಗಿಂತ ಭಿನ್ನವಾಗಿ, ಪ್ರೋಟೀನ್-ಆಧರಿತ ಲಸಿಕೆ ಉತ್ಪಾದಿಸುವ ನೋವಾವ್ಯಾಕ್ಸ್ ಕೋವಿಡ್-19 ವಿರುದ್ಧದ ಲಸಿಕೆಗಳ ಬತ್ತಳಿಕೆಗೆ ಹೊಸ ಅಸ್ತ್ರವೊಂದನ್ನು ಸೇರಿಸಿದೆ.
ನೋವಾವ್ಯಾಕ್ಸ್‌ನ ಲಸಿಕೆಗಳನ್ನು ವಯಸ್ಕರಲ್ಲಿ ಬಳಸಲು ಬ್ರಿಟನ್, ಯೂರೋಪ್ ಮತ್ತು ಇತರೆ ದೇಶಗಳಲ್ಲಿ ಅನುಮತಿ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಬಳಕೆಗೆ ಅನುಮತಿ ಪಡೆದಿರುವ ನೋವಾವ್ಯಾಕ್ಸ್ ಸದ್ಯ ಅಮೆರಿಕದ ಆಹಾರ ಮತ್ತು ಮದ್ದು ಆಡಳಿತದ ಪರಿಶೀಲನೆಯಲ್ಲಿದೆ.
BIG NEWS: ಪೊಲೀಸ್ ಇನ್ಸ್ ಪೆಕ್ಟರ್ ಕಾರಿನ ಗಾಜು ಒಡೆದ ಕಳ್ಳ; ಲ್ಯಾಪ್ ಟಾಪ್, 50,000 ಹಣ ದೋಚಿ ಪರಾರಿಯಾದ ಖದೀಮ
ಈ ಹೊಸ ದತ್ತಾಂಶದ ಮೂಲಕ 12ರ ವಯಸ್ಸಿನ ಮಕ್ಕಳಿಗೂ ತನ್ನ ಲಸಿಕೆಗಳನ್ನು ವಿಸ್ತರಿಸಲು ನೋವಾವ್ಯಾಕ್ಸ್ ಸಜ್ಜಾಗಿದೆ. ಈ ವರ್ಷದಲ್ಲಿ ಮಕ್ಕಳ ಮೇಲೂ ತನ್ನ ಲಸಿಕೆಗಳನ್ನು ಪ್ರಯೋಗಿಸಲಿದೆ ನೋವಾವ್ಯಾಕ್ಸ್.
ಅಮೆರಿಕದ 2,247 ಮಕ್ಕಳನ್ನು ಒಳಗೊಂಡ ಹೊಸ ಅಧ್ಯಯನದಲ್ಲಿ, ನೋವ್ಯಾಕ್ಸ್‌ನ ಎರಡು ಲಸಿಕೆ ಪಡೆದ ಮಂದಿಯಲ್ಲಿ ಕೋವಿಡ್-19 ಸೋಂಕಿನ ವಿರುದ್ಧ 80% ರಕ್ಷಣೆ ನೀಡಬಹುದು ಎಂದು ಕಂಡುಕೊಂಡಿರುವುದಾಗಿ ನೋವಾವ್ಯಾಕ್ಸ್ ಹೇಳಿಕೊಂಡಿದೆ.