ಚಳಿಗಾಲದಲ್ಲಿ ಹೆಚ್ಚಾಗಿ ಕೂದಲು ಶುಷ್ಕವಾಗಿ ನಿರ್ಜೀವವಾಗುತ್ತದೆ.
ಇದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಆಗ ಕೂದಲುದುರಲು ಶುರುವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಕೂದಲನ್ನು ಈ ರೀತಿಯಾಗಿ ಪೋಷಣೆ ಮಾಡಿ.
*ವಾರಕ್ಕೊಮ್ಮೆ ಎಣ್ಣೆ ಬಿಸಿ ಮಾಡಿ ಕೂದಲಿಗೆ ಮಸಾಜ್ ಮಾಡಿ. ಬಳಿಕ ಶಾಂಪುವಿನಿಂದ ಕೂದಲು ವಾಶ್ ಮಾಡಿ.
*ಚಳಿಗಾಲದಲ್ಲಿ ನೆತ್ತಿ ಶುಷ್ಕವಾಗುವುದನ್ನು ತಡೆಯಲು ಅಲೋವೆರಾ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿ ನೆತ್ತಿಗೆ ಹಚ್ಚಿ.
*ವಾರಕ್ಕೊಮ್ಮೆ ಕೂದಲಿಗೆ ಮೊಸರು, ತೆಂಗಿನೆಣ್ಣೆ, ಆಲಿವ್ ಆಯಿಲ್ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಹೇರ್ ಪ್ಯಾಕ್ ಹಚ್ಚಿ. ಇದರಿಂದ ಕೂದಲು ತೇವಾಂಶದಿಂದ ಕೂಡಿರುತ್ತದೆ.
*ನೆತ್ತಿಯಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸೋಂಕುಗಳನ್ನು ನಿವಾರಿಸಲು 3 ಚಮಚ ಆಪಲ್ ಸೈಡರ್ ವಿನೆಗರ್ ನೀರಿಗೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.