ರಾಜ್‌ಗಢ (ಮಧ್ಯಪ್ರದೇಶ): ರಾಜ್‌ಗಢದಲ್ಲಿ ಕುಖ್ಯಾತ ಕೋತಿಯೊಂದು ಕಚ್ಚಿದ್ದು, ಇದುವರೆಗೆ 5 ಮಕ್ಕಳು ಸೇರಿದಂತೆ ಸುಮಾರು 25 ನಿವಾಸಿಗಳ ಮೇಲೆ ದಾಳಿ ಮಾಡಿದೆ.
ರಾಜ್‌ಗಢ ಪುರಸಭೆ ಅಧ್ಯಕ್ಷರು ಕೋತಿಯನ್ನು ಬೋನಿಗೆ ಹಿಡಿದವರಿಗೆ 21,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕೋತಿಯು ಜನರನ್ನು ವಿಪರೀತವಾಗಿ ಕಚ್ಚಿದ್ದು, ಹೆಚ್ಚಿನವರಿಗೆ ಹೊಲಿಗೆ ಹಾಕಬೇಕಾಯಿತು.
ನಗರದ ಜನರಲ್ಲಿ ಆತಂಕ ಮನೆ ಮಾಡಿದೆ. ಕೋತಿಯನ್ನು ಹಿಡಿಯಲು ಪಾಲಿಕೆ ಹಾಗೂ ಆಡಳಿತ ಮಂಡಳಿ ಶತಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ, ಬಹುಮಾನವಾಗಿ ರೂ. 21000 ವನ್ನು ಪುರಸಭೆ ಅಧ್ಯಕ್ಷ ವಿನೋದ್ ಸಾಹು ಘೋಷಿಸಿದ್ದಾರೆ. ಇದರೊಂದಿಗೆ ಅರಣ್ಯ ತಂಡ ಹಾಗೂ ನಗರಸಭೆ ಕೋತಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
“ಯಾವುದೇ ನಷ್ಟ ಅಥವಾ ಹಾನಿಯಾಗದಂತೆ ಕೋತಿಯನ್ನು ಸುರಕ್ಷಿತವಾಗಿ ಹಿಡಿಯುವುದು ನಮ್ಮ ಪ್ರಯತ್ನ. ಮಂಗ ಹಿಡಿಯುವ ಕೆಲಸ ಅರಣ್ಯ ಇಲಾಖೆಯಿಂದ ಆಗಬೇಕು. ಆದಾಗ್ಯೂ ಕೋತಿ ಹಿಡಿಯಲು 21 ಸಾವಿರ ಘೋಷಣೆ ಮಾಡಿದ್ದೇವೆ, ಕೋತಿಯನ್ನು ಹಿಡಿದು ಸುರಕ್ಷಿತವಾಗಿ ಬಿಡುವವರಿಗೆ 21 ಸಾವಿರ ಬಹುಮಾನ ನೀಡುತ್ತೇವೆ ಎಂದು ಪುರಸಭೆ ಅಧ್ಯಕ್ಷ ವಿನೋದ್ ಸಾಹು ತಿಳಿಸಿದರು.