ನವದೆಹಲಿ: ವೋಟರ್ ಐಡಿ ಜೊತೆಗೆ ಆಧಾರ್ ಜೋಡಣೆಗೆ ಆದೇಶ ಹೊರಡಿಸಲಾಗಿದೆ. ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಆಧಾರ್ ನಂಬರ್ ಜೊತೆ ಜೋಡಣೆ ಮಾಡುವುದು ಸೇರಿದಂತೆ ಚುನಾವಣೆ ಸುಧಾರಣೆಗೆ ಸಂಬಂಧಿಸಿದ ನಾಲ್ಕು ತಿದ್ದುಪಡಿಗಳ ಜಾರಿಗೆ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಯೋಜನೆ ರೂಪಿಸಲಾಗಿದ್ದು, ಹೊಸ ಮತದಾರರ ಹೆಸರು ಸೇರ್ಪಡೆಗೆ ವರ್ಷಕ್ಕೆ ನಾಲ್ಕು ಸಲ ಅವಕಾಶ ನೀಡಲಾಗುವುದು. ಚುನಾವಣೆ ಕಾನೂನು ತಿದ್ದುಪಡಿ ಕಾಯ್ದೆ 2021 ಕಳೆದ ವರ್ಷವೇ ಸಂಸತ್ ನಲ್ಲಿ ಅಂಗೀಕರಿಸಲಾಗಿದ್ದು, ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸಿ ಈಗ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.