ನವದೆಹಲಿ: ಎಲ್ಲಾ ಪೆಟ್ರೋಲ್ ಬಂಕ್ ಗಳು ತಮ್ಮ ವ್ಯಾಪ್ತಿಯ 100 ಮೀಟರ್ ಸುತ್ತಮುತ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.
ಮೇ ತಿಂಗಳಲ್ಲಿ ಮುಂಬೈನ ಘಾಟ್ಕೋಪರ್ ಪೆಟ್ರೋಲ್ ಬಂಕ್ ಮೇಲೆ ಬೃಹತ್ ಜಾಹೀರಾತು ಫಲಕ ಉರುಳಿ ಬಿದ್ದು, ಹಲವರು ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ತನಿಖೆಗೆ ಮಂಡಳಿಯಿಂದ ಸಮಿತಿ ರಚಿಸಲಾಗಿತ್ತು. ಸಮಿತಿಯು ಮಂಡಳಿಗೆ ಅಂತಿಮ ವರದಿ ಸಲ್ಲಿಸಿದ್ದು, ಅದರ ಶಿಫಾರಸಿನಂತೆ ಎಲ್ಲ ಇಂಧನ ಮಾರಾಟಗಾರರು ಮತ್ತು ಷೇರುದಾರರು ಒಂದು ತಿಂಗಳೊಳಗೆ ಬಂಕ್ ನ ಆವರಣದ ಸುತ್ತಮುತ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಬಂಕ್ ಆವರಣ ಮತ್ತು ಸುತ್ತಮುತ್ತ ಇರುವ ಅಪಾಯಕಾರಿ ಜಾಹೀರಾತು ಫಲಕಗಳು, ಬಿಲ್ಬೋರ್ಡ್, ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸುವಂತೆ ತಿಳಿಸಲಾಗಿದೆ.