ಕೊರೊನಾ ಸಾಂಕ್ರಾಮಿಕ ದಾಳಿ, ನಂತರ ವಾರಗಟ್ಟಲೆ ಲಾಕ್ಡೌನ್ನಿಂದ ದೇಶವು ತತ್ತರಿಸಿದಾಗ ಮನೆ ಬಾಗಿಲಿಗೇ ಊಟ, ಚ್ಯಾಟ್ಸ್, ಜ್ಯೂಸ್ಗಳನ್ನು ತಂದುಕೊಟ್ಟು ಲಕ್ಷಾಂತರ ಜನರಿಗೆ ಸೇವೆ ಒದಗಿಸಿದ್ದು ಸ್ವಿಗ್ಗಿ, ಜೊಮ್ಯಾಟೊದಂತಹ ಆನ್ಲೈನ್ ಆಹಾರ ಸರಬರಾಜು ಕಂಪನಿಯ ಡೆಲಿವರಿ ಬಾಯ್ಗಳು.
ಅವರು ಉಚಿತವಾಗಿ ಕೆಲಸ ಮಾಡಿಲ್ಲ, ಆದರೆ ಪ್ರಾಣ ಒತ್ತೆ ಇಟ್ಟು ಫ್ರಂಟ್ಲೈನ್ ವಾರಿಯರ್ಗಳಂತೆ ಹಸಿವು ನೀಗಿಸಿದ್ದಾರೆ. ಅಂಥವರಿಗೆ ರಾಜಸ್ಥಾನದ ಮಾಲ್ವೊಂದರಲ್ಲಿ ಲಿಫ್ಟ್ ಬಳಸದಂತೆ ನಿರ್ಬಂಧ ಹೇರಲಾಗಿದೆ. ಡೆಲಿವರಿ ಬಾಯ್ ಕಡ್ಡಾಯವಾಗಿ ಮೆಟ್ಟಿಲುಗಳನ್ನು ಹತ್ತಿಕೊಂಡೇ ಹೋಗಬೇಕಂತೆ…!
ಇಂಥ ವೃತ್ತಿ ತಾರತಮ್ಯ ಅಥವಾ ಪುರಾತನ ಕಾಲದ ಊಳಿಗಮಾನ್ಯ ವ್ಯವಸ್ಥೆಯನ್ನು ಖಂಡಿಸಬೇಕಿದೆ ಎಂದು ನಿರ್ಬಂಧದ ನೋಟಿಸ್ನ ಫೋಟೊ ತೆಗೆದು ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿದ್ದಾರೆ.
ಇದು ವೈರಲ್ ಆಗಿದ್ದು, ಅನೇಕರು ಮಾಲ್ನ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿದೇಶಗಳಲ್ಲಿ ಡೆಲಿವರಿ ಸೇವೆಗಳಿಗೆ ಲಿಫ್ಟ್ ಬಳಸಲು ಅಲ್ಲಿನ ಜನರು ಮೊದಲ ಆದ್ಯತೆ ನೀಡುತ್ತಾರೆ. ಯಾಕೆಂದರೆ ಅದು ಬೇರೆಯವರಿಗೆ ತಲುಪಬೇಕಾದ ವಸ್ತು ಆಗಿರುತ್ತದೆ. ಜತೆಗೆ ಅವರು ತುರ್ತು ಪರಿಸ್ಥಿತಿಯಲ್ಲಿ ಇರಬಹುದು ಎಂದು ಅವರು ಭಾವಿಸಿದ್ದಾರೆ. ಆದರೆ, ನಮ್ಮಲ್ಲಿ ಇನ್ನೂ ಕೂಡ ಕೆಲವು ವೃತ್ತಿಯನ್ನು ಕೀಳಾಗಿ ಕಾಣುವ ಹೀನ ಮನಃಸ್ಥಿತಿ ಇದೆ ಎಂದು ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ.
https://twitter.com/kluzener/status/1439254769046999042?ref_src=twsrc%5Etfw%7Ctwcamp%5Etweetembed%7Ctwterm%5E1439254769046999042%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-notice-banning-food-delivery-agents-zomato-swiggy-udaipur-mall-lift-twitter-outrage-4219706.html