alex Certify ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಫೋಟೋ ಶೇರ್‌ ಮಾಡಿದ್ದ ವೈದ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಫೋಟೋ ಶೇರ್‌ ಮಾಡಿದ್ದ ವೈದ್ಯೆ

ಹಾಲಿಡೇ ಮೂಡ್‌ನಲ್ಲಿದ್ದ ಜೈಪುರದ 34 ವರ್ಷದ ದೀಪಾ ಶರ್ಮಾ ಹಿಮಾಚಲ ಪ್ರದೇಶದ ನಾಗಸ್ತಿ ಪೋಸ್ಟ್‌ ಬಳಿ ನಿಂತುಕೊಂಡು ತಮ್ಮದೊಂದು ಚಿತ್ರವನ್ನು 12:59ರಲ್ಲಿ ಶೇರ್‌ ಮಾಡಿಕೊಂಡು, “ನಾಗರಿಕರನ್ನು ಪ್ರವೇಶಿಸಲು ಬಿಡುವ ಭಾರತದ ತುತ್ತ ತುದಿಯಲ್ಲಿ ನಿಂತಿರುವೆ. ಈ ತುದಿಯಿಂದ 80 ಕಿಮೀ ಮುಂದಕ್ಕೆ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ಟಿಬೆಟ್‌ ಜೊತೆಗೆ ನಮ್ಮ ಗಡಿ ಇದೆ” ಎಂದು ಪೋಸ್ಟ್‌ ಮಾಡಿದ್ದರು.

ಅದೇ ದಿನ 1:25ರ ಮದ್ಯಾಹ್ನದ ವೇಳೆಗೆ ಭಾರೀ ಮಳೆಯ ಕಾರಣದಿಂದ ಭೂಕುಸಿತವಾಗಿ, ಅದೇ ಜಾಗದಲ್ಲಿ ದೊಡ್ಡ ಬಂಡೆಗಳು ಪ್ರವಾಸಿಗರು ಸಾಗುತ್ತಿದ್ದ ಟೆಂಫೋ ಟ್ರಾವೆಲರ್‌ ಮೇಲೆ ಬಿದ್ದ ಸುದ್ದಿ ವೈರಲ್ ಆಗಿದೆ.

ಮತದಾರರ ಗುರುತಿನ ಚೀಟಿ ಕಳೆದಿದ್ಯಾ….? ಚಿಂತೆ ಬೇಡ ಸುಲಭವಾಗಿ ಪಡೆಯಲು ಇಲ್ಲಿದೆ ಮಾಹಿತಿ

ಆಯುರ್ವೇದ ವೈದ್ಯೆಯಾಗಿದ್ದ ದೀಪಾ ಶರ್ಮಾ ಘಟನೆಯಲ್ಲಿ ಮೃತಪಟ್ಟಿದ್ದು, ಅವರ ದುರ್ವಿಧಿಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದು ಸಂತಾಪ ಸೂಚಿಸಿದೆ. ಮಹಿಳೆಯರಿಗೆ ತಮ್ಮ ಮೂಲ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಹಾಗೂ ಎನ್‌ಜಿಓ ಒಂದರ ಜೊತೆಗೆ ಕೆಲಸ ಮಾಡಲು ದೀಪಾ ಶರ್ಮಾ ಇಲ್ಲಿಗೆ ಬಂದಿದ್ದರು.

ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ಸಂಗ್ಲಾದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಒಂಬತ್ತು ಮಂದಿ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಇತ್ತೀಚಿನ ಮಳೆಯಿಂದಾಗಿ ದೊಡ್ಡ ಮಟ್ಟದಲ್ಲಿ ಭೂಕುಸಿತವಾದ ಕಾರಣ ಇಲ್ಲಿನ ಸಂಗ್ಲಾ-ಚಿಟ್ಕುಲ್ ರಸ್ತೆಯ ಬಸ್ತೇರಿಯಲ್ಲಿ ಸೇತುವೆ ಕುಸಿದ ವಿಡಿಯೋವೊಂದು ವೈರ‍ಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...