ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ ಕೈ ಹಿಡಿದಿರುವ ವಿಡಿಯೋ ಆಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಹಂಚಿಕೊಂಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಮರಿ ಆನೆಯೊಂದು ತನ್ನ ಮಾಲೀಕನ ಕೈಯನ್ನು ಹಿಡಿದಿರುವುದನ್ನು ಕಾಣಬಹುದು. ಜಂಬೂ ತನ್ನ ಸೊಂಡಿಲನ್ನು ಕೇರ್ ಟೇಕರ್ ಕೈಗೆ ಅತ್ಯಂತ ಮುದ್ದಾಗಿ ಸುತ್ತಿಕೊಂಡಿತ್ತು ಮತ್ತು ಅದು ಬಿಡಲು ಬಯಸುವುದಿಲ್ಲ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.
ಈ ಮುದ್ದಾದ ಕ್ಯೂಟ್ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧ ಅನೂಹ್ಯವಾದದ್ದು ಎನ್ನುತ್ತಿದ್ದಾರೆ.
https://twitter.com/buitengebieden/status/1644454589859504130?ref_src=twsrc%5Etfw%7Ctwcamp%5Etweetembed%7Ctwterm%5E1644454589859504130%7Ctwgr%5Edc87d6b0777b1ad251ad09451baadff29e1b99c7%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fnothing-just-a-video-of-a-baby-elephant-holding-its-caretakers-hand-while-dosing-off-viral-obviously-2357434-2023-04-08