
ಆನೆಗಳ ಹಿಂಡು ಕಾಡಿನ ಪರಿಸರದಲ್ಲಿ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ವಿಹಾರದಲ್ಲಿರುವುದನ್ನು ನೋಡುವುದು ಒಂದು ಚಂದ.
ತಮಿಳು ನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಆನೆಗಳ ಹಿಂಡೊಂದು ಹೀಗೆ ರಸ್ತೆ ಬದಿಯಲ್ಲಿ ಬಲೇ ಮಜವಾಗಿ ವಿಹಾರದಲ್ಲಿರುವ ವಿಡಿಯೋವೊಂದನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಸುಪ್ರಿಯಾ ಸಾಹು ಶೇರ್ ಮಾಡಿಕೊಂಡಿದ್ದಾರೆ.
“ಮುದುಮಲೈನಿಂದ ಮೈಸೂರಿನತ್ತ ಸಾಗುತ್ತಿದ್ದೇನೆ. ಖುಷಿಯಾಗಿ ಒಟ್ಟಿಗೇ ಊಟ ಮಾಡುತ್ತಿರುವ ಈ ಕುಟುಂಬವನ್ನು ಇದೀಗ ಕೆಲ ಹೊತ್ತಿನ ಮುಂಚೆ ಭೇಟಿ ಮಾಡಿದೆ,” ಎಂದು ಸುಪ್ರಿಯಾ ಸಾಹು ಶೇರ್ ಮಾಡಿಕೊಂಡಿದ್ದಾರೆ.
https://twitter.com/ShivaSwami0407/status/1651500419464724480?ref_src=twsrc%5Etfw%7Ctwcamp%5Etweetembed%7Ctwterm%5E1651500419464724480%7Ctwgr%5E310ef2bf605748c9b3f4833229211210349a8aa2%7Ctwcon%5Es1_&ref_url=https%3A%2F%2Fwww.news18.com%2Fbuzz%2Fnothing-just-a-beautiful-family-of-elephants-eating-together-in-mudumalai-national-park-7657939.html