ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಅನ್ನಭಾಗ್ಯ ಯೋಜನೆಯ ಅಕ್ಕಿ ಮಾರಾಟ ಮಾಡಿದ್ರೆ ರೇಷನ್ ಕಾರ್ಡ್ ರದ್ದುಗೊಳಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.
ಅಕ್ರಮವಾಗಿ ‘ಅನ್ನಭಾಗ್ಯ’ ಅಕ್ಕಿ ಮಾರಿಕೊಂಡವರ ವಿರುದ್ಧ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ, ಕಾರ್ಡುದಾರರು ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಪಡಿತರ ಚೀಟಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಮೂಲಕ ಅಕ್ಕಿ ಮಾರಿಕೊಳ್ಳುವವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಜಾರಿಗೆ ತಂದಿರುವ ಸರ್ಕಾರ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.ಸರ್ಕಾರ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ.
ಇದಕ್ಕಾಗಿ ಸರ್ಕಾರ ಡಿಸೆಂಬರ್ 30 ರ ತನಕ ಕಾಲಾವಕಾಶ ನೀಡಿದ್ದು, ಇದನ್ನು ಮಾಡಿಸದೇ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಬೇಕಾಗಿರುತ್ತದೆ. ರೇಷನ್ ಕಾರ್ಡ್ ಪಡಿತರ ಪಡೆಯಲು ಮಾತ್ರವಲ್ಲದೇ ಗುರುತಿನ ಚೀಟಿ ಪಡೆಯಲು ಕೂಡ ಸಹಕಾರಿಯಾಗುತ್ತದೆ. ಈಗಾಗಲೇ ಜಾರಿಗೆ ತಂದಿರುವ ಸರ್ಕಾರ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.ಸರ್ಕಾರ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ.