ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ತುಂಡಾಗಿ ಬಿದ್ದಿರುವ ವೈಯರ್ ಗಳು, ಅಪಾಯಕಾರಿ ಕಂಬಗಳ ಬಗ್ಗೆ ಗಮನಿಸಿದರೆ ತಕ್ಷಣ ಬೆಸ್ಕಾಂ ಅಥವಾ ಪೊಲೀಸರಿಗೆ ವಿಷಯ ತಿಳಿಸಿ ಎಂದು ನಗರ ಪೊಲೀಸ್ ಆಯುಕ್ತ ಬಿಕೆ ದಯಾನಂದ್ ತಿಳಿಸಿದ್ದಾರೆ.
ಭಾನುವಾರ ಮಾಸಿಕ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಇತ್ತೀಚೆಗೆ ಹಲವು ವಿದ್ಯುತ್ ಅವಘಡಗಳು ಸಂಭವಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಕಂಬ ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಅಥವಾ ವಿದ್ಯುತ್ ವೈರ್ ಗಳು ತುಂಡಾಗಿ ಬಿದ್ದಿದ್ದರೆ ಬೆಸ್ಕಾಂ ಸಹಾಯವಾಣಿ 1912 ಅಥವಾ ಪೊಲೀಸರ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಈಗಾಗಲೇ ಬೆಸ್ಕಾಂ ಸಿಬ್ಬಂದಿಗಳು, ಪೊಲೀಸರು ಇಂತಹ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು, ಇಂತಹದ್ದೇನಾದರೂ ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿಗೆ ಸುದ್ದಿ ಮುಟ್ಟಿಸಿ ಎಂದು ಎಂದು ನಗರ ಪೊಲೀಸ್ ಆಯುಕ್ತ ಬಿಕೆ ದಯಾನಂದ್ ಮನವಿ ಮಾಡಿದರು.